ಮೇ 13ಕ್ಕೆ , ಜೆಡಿಎಸ್ ಕ್ಲೀನ್ ಬೋಲ್ಡ್ : ಮೋದಿ ಗುಡುಗು

ಮೇ 13ಕ್ಕೆ , ಜೆಡಿಎಸ್ ಕ್ಲೀನ್ ಬೋಲ್ಡ್ : ಮೋದಿ ಗುಡುಗು

ಕೋಲಾರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕೋಲಾರದಲ್ಲಿ ಮತಬೇಟೆ ನಡೆಸಿದ ನಮೋ, ಕಾಂಗ್ರೆಸ್, ಜೆಡಿಎಸ್‌ ಪಕ್ಷಕ್ಕೆ ಟಕ್ಕರ್ ಕೊಟ್ಟಿದ್ದಾರೆ. ಮೇ 13ಕ್ಕೆ ಕರ್ನಾಟಕದ ಮತದಾರರು ಕಾಂಗ್ರೆಸ್, ಜೆಡಿಎಸ್ ಅನ್ನು ಕ್ಲೀನ್ ಬೋಲ್ಡ್ ಮಾಡಲಿದ್ದಾರೆ ಎಂದಿದ್ದಾರೆ.

ಕನ್ನಡದಲ್ಲೇ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಚಿನ್ನದ ನಾಡು ಕೋಲಾರದ ಜನತೆಗೆ ನಮಸ್ಕಾರಗಳು. ಇಲ್ಲಿ ನೆರೆದಿರೋ ಅಪಾರ ಜನಸಾಗರವನ್ನ ನೋಡಿದ್ರೆ ಕಾಂಗ್ರೆಸ್, ಜೆಡಿಎಸ್ ನಾಯಕರ ನಿದ್ದೆಗೆಡಿಸುತ್ತದೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಅಭಿವೃದ್ಧಿಗೆ ಕಂಟಕಪ್ರಾಯವಾಗಿದ್ದವು. ಕರ್ನಾಟಕದ ಜನತೆ ಈ ಬಾರಿ ಕಾಂಗ್ರೆಸ್, ಜೆಡಿಎಸ್ ಅನ್ನು ಕ್ಲೀನ್ ಬೋಲ್ಡ್ ಮಾಡ್ತಾರೆ. ಈ ಬಾರಿಯ ಚುನಾವಣೆ ಕೇವಲ ಐದು ವರ್ಷಕ್ಕೆ ಎಂಎಲ್‌ಎ, ಸರ್ಕಾರವನ್ನು ರಚನೆ ಮಾಡುವ ಚುನಾವಣೆ ಅಲ್ಲ. 25 ವರ್ಷಗಳ ಕಾಲ ಈ ರಾಜ್ಯದ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸುವ ಚುನಾವಣೆ ಎಂದು ನರೇಂದ್ರ ಮೋದಿ ಹೇಳಿದರು.

ಕರ್ನಾಟಕದಲ್ಲಿ ಅಸ್ಥಿರ ಸರ್ಕಾರ ಬಂದ್ರೆ ಪ್ರಗತಿ ಸಾಧ್ಯವಿಲ್ಲ. ಅಸ್ಥಿರ ಸರ್ಕಾರದಿಂದ ಲಾಭವಿಲ್ಲ, ನಷ್ಟವೇ ಜಾಸ್ತಿ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್‌ನದ್ದು ಔಟ್‌ ಡೇಟೆಡ್ ಎಂಜಿನ್ ಆಗಿದೆ. ಈ ಗುಜರಿ ಎಂಜಿನ್‌ನಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ.