ಅಕ್ಕಿ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ಕೇಂದ್ರ ಸರ್ಕಾರ: ಸಚಿವ ಹೆಚ್.ಕೆ ಪಾಟೀಲ್ 

ಅಕ್ಕಿ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ಕೇಂದ್ರ ಸರ್ಕಾರ: ಸಚಿವ ಹೆಚ್.ಕೆ ಪಾಟೀಲ್ 

 

ಗದಗ,ಜು 1:ಕೇಂದ್ರ ಸರ್ಕಾರ ಅಕ್ಕಿ‌ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ‌ ಮಾಡಿದೆ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ‌ ಕೊಡಬೇಡಿ ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ನಡುವೆ ತಿಕ್ಕಾಟ ಮುಂದುವರೆದಿದೆ. ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ಅಕ್ಕಿ‌ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ‌ ಮಾಡಿದ್ದೇ ಕೇಂದ್ರ ಸರ್ಕಾರ ಎಂದು ಗುಡುಗಿದ್ದಾರೆ. ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಜನರ ಮನಸ್ಸನ್ನ‌ ಕೆಡಿಸಿ ಗೊಂದಲ‌ಸೃಷ್ಠಿ ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನ ವಿಫಲವಾಗಿದೆ ಇಂತಹ ನಿಲುವಿಗೆ ಆ ಪಕ್ಷದ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.