ಬಿಎಸ್ ವೈ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ಗುಡ್ ಬೈ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರ್ಪಡೆ

ಬಿಎಸ್ ವೈ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ಗುಡ್ ಬೈ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರ್ಪಡೆ

 

ಬೆಳಗಾವಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ರಾಜೀನಾಮೆ ನೀಡಿ ಮಧ್ಯಾಹ್ನ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕೆಜೆಪಿ ಕಟ್ಟಿದ ವೇಳೆ ಮೊದಲನೆಯದಾಗಿ ರಾಜೀನಾಮೆ ಸಲ್ಲಿಸಿದ್ದು ಮೋಹನ್ ಲಿಂಬಿಕಾಯಿ ಅವರಾಗಿದ್ದರು. ಅಂದು ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಎಸ್​ವೈ ಹಿಂದೆ ಸಾಗಿದ್ದರು. ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು.