ಮುಂಬೈ: ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟಿ ಸಾವನ್ನಪ್ಪಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿದ್ದ ಪೂನಂ ಪಾಂಡೆ ಆಗಾಗ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿರುವ ನಟಿ ಅದರಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ಆ ವಿಡಿಯೋಗೆ ‘ಬಿಳಿ ಮತ್ತು ಕಪ್ಪು: ನನ್ನ ಒಳಗೆ ಮತ್ತು ಯವ್ವನದ ಜೀವನವನ್ನು ಸಮತೋಲನಗೊಳಿಸುತ್ತದೆ’ ಎಂದು ಬರೆದಿದ್ದರು. ಆದರೀಗ ನಟಿಯ ಸಾವು ಇದ್ದಕ್ಕಿದ್ದಂತೆಯೇ ಎಲ್ಲರಿಗೆ ಶಾಕ್ ನೀಡಿದೆ.
ಪೂನಂ ಪಾಂಡೆ 11 ಮಾರ್ಚ್ 1991ರಂದು ಕಾನ್ಸುರದಲ್ಲಿ ಜನಿಸಿದರು. ಶೋಭಾನಾಥ್ ಪಾಂಡೆ ಮತ್ತು ವಿದ್ಯಾ ಪಾಂಡೆಯ ಮಗಳಾಗಿ ಜನಿಸಿದ ಈಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮೃತ ಪೂನಂ ಪಾಂಡೆ ಶ್ರದ್ಧಾ ಪಾಂಡೆ ಮತ್ತು ನಿಲೇಶ್ ಪಾಂಡೆ ಎಂಬ ಸಹೋದರ, ಸಹೋದರಿಯನ್ನು ಬಿಟ್ಟು ಅಗಲಿದ್ದಾರೆ.