ಸುವರ್ಣಲೋಕ ದಿನಪತ್ರಿಕೆಯ ವೀಶ್ಲೆಷಣೆ
ಬೆಳಗಾವಿ: ರಾಜ್ಯದಲ್ಲಿ ಪ್ರಬಲ ಸಮುದಾಯ ಹೊಂದಿರುವ ಲಿಂಗಾಯತ ಸಮುದಾಯ ಆಶೀರ್ವಾದಿಂದ 2018ರಲ್ಲಿ ಅಧಿಕಾರಕ್ಕೆ ಏರಿದ ಬಿಜೆಪಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಮಹತ್ವದ ಮಾಹಿತಿ ಸುಳಿದಾಡುತ್ತಿದೆ.
2ಎ ಮೀಸಲಾತಿಯಲ್ಲಿ ಅಸ್ತ್ರ:
2ಎ ಮೀಸಲಾತಿಯಲ್ಲಿ ಲಿಂಗಾಯತ ಸಮುದಯಕ್ಕೆ ಹಿನ್ನಡೆಯಾಗಿದ್ದು, ಸದ್ಯ ನಡೆಯುತ್ತಿರುವ ಬದಲಾವಣೆ ಕೇಸರಿ ಪಕ್ಷದ ನಾಯಕರನ್ನು ಆತಂಕಕ್ಕೆ ದೂರಿದೆ. ಮೂರು ದಶಕಗಳ ಹೊರಕ್ಕೆ ಸರ್ಕಾರ ಗೌರವ ನೀಡಿಲ್ಲವೆಂಬ ಕಾರಣಕ್ಕೆ ಲಿಂಗಾಯತರು ಸರ್ಕಾರ ಮೇಲೆ ಮುಣಿಸಿಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪರಿಣಾಮ ಬಿರಲಿದೆ.
ಲಿಂಗಾಯತರಿಗೆ ಅಗೌರವ: ಬಿಜೆಪಿ ವಿರುದ್ಧ ಬಹಿರಂಗವಾಗಿ ಕೆಲಸ ಮಾಡುತ್ತಿರುವ ಜಾಗತಿಕ ಲಿಂಗಾಯತ ಚಳುವಳಿ, ಪಂಚಮಸಾಲಿ ಗುಂಪುಗಳು ಮತ್ತು ರಾಷ್ಟ್ರೀಯ ಬಸವ ದಳದ ಸದಸ್ಯರು ಈ ಬದಲಾವಣೆಗೆ ಕಾರಣರಾಗಿದ್ದಾರೆ, ಸಮುದಾಯದ ನಿಲುವನ್ನು ಸ್ಪಷ್ಟಪಡಿಸಿದ ಪಂಚಮಸಾಲಿ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ನಮ್ಮ ಕೋಪ ಕೇವಲ ಮೀಸಲಾತಿ ವಿಷಯದ ಮೇಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಎರಡು ವರ್ಷ ಕಳೆದರೂ ಬಿಜೆಪಿ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ನಾವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಮ್ಮೊಂದಿಗೆ ಮಾತನಾಡಲು ಸರ್ಕಾರಕ್ಕೆ ಸಮಯವಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಂದು ನಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಂಚಮಸಾಲಿಗಳು ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಜೆಪಿಗೆ ಈ ಬಾರಿ ಲಿಂಗಾಯತ ಸಮುದಾಯ ಬೆಂಬಲ ನೀಡುವಲ್ಲಿ ದೊಡ್ಡ ತೊಡಕುಗಳಿವೆ ಎಂದು ಲಿಂಗಾಯತ ಚಳವಳಿಗಳೊಂದಿಗೆ ಗುರುತಿಸಿಕೊಂಡಿದೆ.
ಲಿಂಗಾಯತ ಸಮುದಾಯ ಪ್ರಭಾವಿ ಜನಪ್ರಿಯ ನಾಯಕ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿದ ಕೋಪವು ಬಿಜೆಪಿ ಮೇಲೆ ಇದೆ. ಇದೇ ಅಸ್ತ್ರ ಬಳಿಸಿಕೊಂಡು ಚುನಾವಣೆ ಲಿಂಗಾಯತ ಸಮುದಾಯ ಉತ್ತರ ನೀಡುವುದು ದಟ್ಟವಾಗಿದೆ. ನಾಡ ದೊರೆ ಬಿಎಸ್ ವೈ ಕಣ್ಣೀರು ಹಾಕಿಸಿದ ಬಿಜೆಪಿಯನ್ನು ಕೆಳಗಿಸುವ ರಣತಂತ್ರವನ್ನು ಲಿಂಗಾಯತ ರೂಪಿಸಿರುವ ಮಾಹಿತಿ ಇದೆ.ಲಿಂಗಾಯತ ಸಮುದಾಯ ಬೆಂಬಲ ಕಡಿಮೆಯಾಗುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಪಂಚಮಸಾಲಿ ಉಪಪಂಗಡ ಸೇರಿದಂತೆ ಹಲವು ಸ್ವಯಂಸೇವಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.