ದಕ್ಷಿಣ ಭಾರತದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ : ದೇಶದಲ್ಲಿ ಬಿಜೆಪಿ 200 ಸೀಟೂ ದಾಟುವುದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್

ದಕ್ಷಿಣ ಭಾರತದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ : ದೇಶದಲ್ಲಿ ಬಿಜೆಪಿ 200 ಸೀಟೂ ದಾಟುವುದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್

 

ಬೆಂಗಳೂರು,ಏ19. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ​ಗೆ ಉಳಿದುಕೊಳ್ಳುತ್ತಾರೆ. ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸೀಟೂ ದಾಟುವುದಿಲ್ಲ ಎಂಬ ಮಾಹಿತಿ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ನುಡಿದರು.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ದಕ್ಷಿಣ ಭಾರತದ ಎಲ್ಲ ಕಡೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ​ಗೆ ಉಳಿದುಕೊಳ್ಳುತ್ತಾರೆ.

ಕರ್ನಾಟಕ ತೆಲಂಗಾಣ ಸೇರಿ ಎಲ್ಲ ಕಡೆಯೂ ಬಿಜೆಪಿ ಸಿಂಗಲ್ ಡಿಜಿಟ್​ಗೆ ಉಳಿಯಲಿದೆ ಎಂಬ ಮಾಹಿತಿ ಸಿಕ್ಕಿದೆ ಎಂದರು.ರಾಜ್ಯದ ಉದ್ದಗಲಕ್ಕೂ ಹಲವು ಮುಖಂಡರು ಬಿಜೆಪಿ, ಜೆಡಿಎಸ್​ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯವರಿಗೆ ಧ್ವನಿ ಇಲ್ಲ, ಧ್ವನಿ ಕಳೆದುಕೊಂಡಿದ್ದಾರೆ. ಷರತ್ತು ಇಲ್ಲದೆ ಪಕ್ಷಕ್ಕೆ ಬರುವವರಿಗೆ ನಮ್ಮ ಸ್ವಾಗತ. ಸ್ಥಳೀಯ ಮಟ್ಟದಲ್ಲಿ ಯಾರು ಬೇಕಾದರೂ ಬರಬಹುದು.