ಮಂಗಳೂರು: ಚುನಾವಣೆ ಹೊತ್ತಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಶಾಸಕ ಸಂಜೀವ್ ಮಠಂದೂರು ಮಹಿಳೆ ಜೊತೆ ಇರುವ ಅಶ್ಲೀಲ ಫೋಟೋಗಳು ವೈರಲ್ ಆಗಿದೆ.
ಶಾಸಕ ಸಂಜೀವ್ ಮಠಂದೂರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. , ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಇಂದು (ಏಪ್ರಿಲ್ 06) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಹಿಳೆ, ನನ್ನ ವೈಯಕ್ತಿ ಫೋಟೋಗಳನ್ನು ಪುತ್ತೂರಿನ ಶಾಸಕರ ಫೋಟೋ ಜೊತೆ ಜೋಡಿಸಿದ್ದು, ಎಡಿಟ್ ಮಾಡಿದ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ.
ಇದರಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ಓರ್ವ ಮಹಿಳೆ ಮೇಲೆ ಈ ರೀತಿ ದೌರ್ಜನ್ಯ ಎಸಗುತ್ತಿದ್ದಾರೆ. ಶಾಸಕರಿಗೂ ನನಗೂ ಸಂಬಂಧವಿಲ್ಲ. ಆದರೂ ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.