ಗುವಾಹಟಿ: ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ 70 ವರ್ಷಗಳಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ಆರೋಪಿಸುತ್ತಿದೆ. 10 ವರ್ಷಗಳಲ್ಲಿ ಬಿಜೆಪಿ ಗಳಿಸಿದ್ದಷ್ಟು ಹಣವನ್ನು 70 ವರ್ಷಗಳಲ್ಲಿ ಕಾಂಗ್ರೆಸ್ ಗಳಿಸಿಲ್ಲ. ಕೇವಲ 10 ವರ್ಷಗಳಲ್ಲಿ ಅವರು ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದ್ದಾರೆ. ದೇಶ ಮತ್ತು ಜಗತ್ತು ಮತ್ತು ನಾವು ಭ್ರಷ್ಟರು ಮತ್ತು ಅವರು ಪ್ರಾಮಾಣಿಕರು ಎಂದು ಅವರು ಹೇಳುತ್ತಾರೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆರೋಪಕ್ಕೆ ಉತ್ತರವಾಗಿ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿದ ಅವರು, ಪ್ರಜ್ವಲ್ ರೇವಣ್ಣ ದೇಶದಿಂದ ಪಲಾಯನ ಮಾಡಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಿರಬೇಕು. ಬಿಜೆಪಿ ಪಕ್ಷಕ್ಕೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಇಂತಹ ಅಪರಾಧ ಎಸಗಿದ್ದಾನೆ. ಸಾವಿರಾರು ವೀಡಿಯೊಗಳು ಹೊರಬಂದಿವೆ. ಇನ್ನು ಲೋಕಸಭೆ ಚುನಾವಣೆ ವೇಳೆ ಮೋದಿಜಿ ಅಪರಾಧ ಎಸಗಿದ ವ್ಯಕ್ತಿ ಪರ ಮತಯಾಚಿಸಿದ್ದಾರೆ.
ಅಸ್ಸಾಂನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾದ್ರಾ. ಉನ್ನಾವೊ ಮತ್ತು ಹತ್ರಾಸ್‌ನಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಸಗಿದವರನ್ನು ವಿರುದ್ಧ ಬಿಜೆಪಿ ಮೌನ ವಹಿಸಿದ್ದು ಆರೋಪಿಗಳನ್ನು ರಕ್ಷಿಸಿದೆ. ಕಳೆದ ವರ್ಷ ಮಣಿಪುರದಲ್ಲಿ ನಡೆದ ಹಿಂಸಾಚಾರದ ನಡುವೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಕೇಸರಿ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಪತ್ನಿಯನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಪರೇಡ್ ಮಾಡಲಾಗಿತ್ತು. ಎಲ್ಲರೂ ಆ ವಿಡಿಯೋ ನೋಡಿದ್ದಾರೆ. ಮೋದಿ ಮತ್ತು ಅಮಿತ್ ಶಾ ಹೇಗೆ ಮೌನವಾಗಿದ್ದಾರೆ? ಮಹಿಳೆಯನ್ನು ರಕ್ಷಿಸಲು ಬಂದಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ ಎಲ್ಲೆಂದರಲ್ಲಿ ಅಪರಾಧಗಳು ನಡೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಕುಸ್ತಿಪಟುಗಳೊಂದಿಗೆ ಮೋದಿ ಫೋಟೋಗಳನ್ನು ಕ್ಲಿಕ್ಕಿಸಿದರು. ಅದೇ ಮಹಿಳೆಯರು ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ದೌರ್ಜನ್ಯದ ವಿರುದ್ಧ ಆರೋಪ ಮಾಡಿದ್ದರೂ ಅವರ ಸಹಾಯಕ್ಕೆ ಬಾರದ ಮೋದಿ ಮೌನವಹಿಸಿದ್ದರು.