This is the title of the web page
This is the title of the web page

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಿಜೆಪಿ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪನ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ : ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಿಜೆಪಿ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪನ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ  : ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ

 

ಬೆಂಗಳೂರು:  ಜಯಬಸವ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಪಂಚಮಸಾಲಿ ಮೀಸಲಾತಿ ಬಗ್ಗೆ ಮಾರ್ಚ 15 ರವರಗೆ ಸರ್ಕಾರಕ್ಕೆ ಕಲಾವಕಾಶ ನೀಡಲಾಗಿತ್ತು.ಅದರೆ ಇದುವರೆಗೂ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ನಮ್ಮ ನಾಯಕರೊಂದಿಗೆ ಈ ಬಗ್ಗೆ ಚರ್ಚೆಯು ಮಾಡಿಲ್ಲ*.
ಲಿಂಗಾಯತ ನಾಯಕರೆಂದು ತಿಳಿದುಕೊಂಡು ನಮ್ಮ ಸಮಾಜ ಇಪ್ಪತ್ತು ವರ್ಷಗಳ ಕಾಲ ಯಡಿಯೂರಪ್ಪ ನವರನ್ನು ನಂಬಿ ಮತವನ್ನ ಹಾಕಿದೆ . ಅದರೆ ಲಿಂಗಾಯತ ಸಮಾಜದಲ್ಲಿಯೇ ಅತ್ಯಂತ ಬಹು ದೊಡ್ಡ ಸಮಾಜ ಬೀದಿಯಲ್ಲಿ 61ದಿನ ಸತ್ಯಾಗ್ರಹ ಮಾಡುತ್ತಿದ್ದರು ಸಹ ಸ್ಪಂದಿಸಿಲ್ಲ ಲಿಂಗಾಯತ ಸಿಎಂ ಬೊಮ್ಮಾಯಿ ನಮ್ಮಿಂದ ಮತ ಭಿಕ್ಷೆ ಬೇಡಿ ಅಧಿಕಾರದಲ್ಲಿ ಕುಳಿತು, ನಮ್ಮನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.ಇವರನ್ನು ಹೇಗೆ ಲಿಂಗಾಯತ ನಾಯಕ ಎಂದು ಒಪ್ಪಲು ಸಾಧ್ಯ. ಇನ್ನು ಮುಂದೆ ಒಪ್ಪಲು ಸಮಾಜದವರಿಗೆ ಸಾಧ್ಯವಿಲ್ಲ.
ಆದ್ದರಿಂದ ಪ್ರಧಾನಿ ಮೋದಿಯವರು ಹಾಗೂ ಅಮಿತ್ ಶಾ ರವರು ಇವರನ್ನು ನಂಬಿ ಚುನಾವಣೆಗೆ ಹೋದರೆ , ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ಕಾರಣ ನಮ್ಮ ಸಮಾಜ ಇವರು ಮೀಸಲಾತಿಗೆ ಮಾಡಿದ ಮೊಸದಿಂದ ಅಸಮಾಧಾನಗೊಂಡಿದ್ದಾರೆ

(1) ಸರಕಾರ ಅಧಿಕಾರದಲ್ಲಿ ಇರುವವರೆಗೂ , ನಮ್ಮ ಸತ್ಯಾಗ್ರಹವನ್ನು ಮುಂದುವರೆಸುತ್ತೆವೆ*.
(2) ಬರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟ ನಿಲುವನ್ನು ಕೈಗೊಳ್ಳದಿದ್ದರೆ.ಮರುದಿನವೇ ತುರ್ತು ಸಭೆ ಸೇರಿ , ಯಾವ ದಿನಾಂಕದಂದು ಯಾವ ಭಾಗಗಳಲ್ಲಿ ರಾಜ್ಯ ಯಾತ್ರೆ ಹೋರಡಬೇಕು.ಯಾವ ವ್ಯಕ್ತಿಗಳಿಗೆ ಬೆಂಬಲಿಸಬೇಕು , ಹಾಗೂ ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸಬೆಕೊ ಬೇಡವೋ  ,ಎಂಬುದನ್ನು ನಿರ್ಧರಿಸಲಾಗುವುದು
(3) ಪಕ್ಷಾತಿತವಾಗಿ ಚುನಾವಣೆ ಬಗ್ಗೆ ಮಾಹಿತಿ ಪಡೆಯಲು ದಾನಪ್ಪ ಗೌಡರು ಹಾಗೂ ಚುನಾವಣೆ ಪ್ರಚಾರ ಮಾಡಲು ಬಿಎಸ್ ಪಾಟೀಲ್ ನಾಗರಳ್ ಹುಲಿ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.

ಎರಡು ವರ್ಷಗಳ ಎರಡು ತಿಂಗಳ ” ಪಂಚಮಸಾಲಿ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ” ಐತಿಹಾಸಿಕ ಚಳುವಳಿಯನ್ನು
.ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿರುವ , ಮುಖ್ಯಮಂತ್ರಿಗಳ ವಿಳಂಬ ನೀತಿಯನ್ನು ಖಂಡಿಸಿ
ಪ್ರಥಮ ಜಗದ್ಗುರು ಶ್ರಿ ಬಸವ ಜಯ ಮೃತ್ಯುಂಜಯ ಸ್ವಾಮಿಜಿಯವರು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಕೈಗೊಂಡಿರುವ ನಿರಂತರ ಸತ್ಯಾಗ್ರಹಕ್ಕೆ ಬೆಂಬಲಿಸಿ
ಮೀಸಲಾತಿ ಅನುಷ್ಟಾನವಾಗಲಾರದ್ದನ್ನು ಖಂಡಿಸಿ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಘಟಕವತಿಯಿಂದ , ತಮಟೆ ಬಾರಿಸುತ್ತಾ ಫ್ರೀ ಡಮ್ ವೃತ್ತದವರೆಗೆ ಮಾನವ ಸರಪಳಿ ನಿರ್ಮಿಸಿ ಹಾಗೂ ರಸ್ತೆ ತಡೆ ಮಾಡಿ ಯಶಸ್ವಿಯಾಗಿ ತಮಟೆ ಚಳುವಳಿಯು ಸರ್ಕಾರದ ಗಮನ ಸೆಳೆಯುವಲ್ಲಿ ಪರಿಣಾಮ ಬೀರಿತು. ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು ಜಿಲ್ಲಾ ಅಧ್ಯಕ್ಷ ಬಸವನಗೌಡ ತೊಂಡಿಹಾಲ್ , ತಾಲೂಕು ಅಧ್ಯಕ್ಷ ಶಿವಪ್ಪ ಯಲಬುರ್ಥಿ , ಉಪಾಧ್ಯಕ್ಷ ಬಸವರಾಜ ಪಾಟೀಲ್ , ಕಾರ್ಯದರ್ಶಿ ಸುಭಾಷ್ ಚಂದ್ರ , ಚನ್ನವೀರ ಗೌಡರು , ಇಶಪ್ಪ , ವಿನಯ ಪಾಟೀಲ್ , ರಾಜ್ಯ ಯುವ ಕಾರ್ಯದರ್ಶಿ ರಾಜೇಶ್ ಪಾಟೀಲ ಶಿವಪುತ್ರಪ್ಪ , ಗವಿಸಿದ್ದಪ್ಪ , ಸುರೇಶ್ ಗೌರಕ್ಕ , ಮಲ್ಲನ ಗೌಡರು , ರುದ್ರಪ್ಪ ತಾಲುರು , ಜಂಬನ್ನ ತಾಲುರು ,ಶಿವಕುಮಾರ್ ಆಲೂರು , ನಾಗರಾಜ ಹಂಚಿನಾಲ್ ,ನಾಗರಾಜ ಬರ್ದುರು , ಬಸವನಗೌಡ ದಾಸನಲ್ ನೂರಾರು ಭಾಗವಹಿಸಿ ಕರ್ತವ್ಯ ಸಮರ್ಪಣೆ ಮಾಡಿದರು. ರಾಷ್ಟ್ರೀಯ ಪಂಚಸೇನಾ ಅಧ್ಯಕ್ಷ ಡಾ.ಬಸವನಗೌಡ ಪಾಟೀಲ್ ನಾಗರಾಲ್ ಹುಲಿ , ನಗರ ಅಧ್ಯಕ್ಷ  ಮಲ್ಲೇವಾಡ, ಪ್ರಧಾನ ಕಾರ್ಯದರ್ಶಿ ಪುಟ್ಟರಾಜ್ , ವಿಭಾಗದ ಬೆಂಗಳೂರ ಅಧ್ಯಕ್ಷ ಕಾಂತೆಶ್ , ಸಾಮಾಜಿಕ ಕಾರ್ಯಕರ್ತ ಶೈಲೆಂದ್ರ ಪಾಟೀಲ್ , ವಿಧ್ಯಾರ್ಥಿ ಘಟಕ ಅಧ್ಯಕ್ಷ ಸಿದ್ದಲಿಂಗೆಶ್ , ಮುಖಂಡರುಗಳು , ಭಾಗವಹಿಸಿದ್ದರು ಎರಡು ತಿಂಗಳ ಹೋರಾಟದ ನಡುವೆ, ಬುಧವಾರ ಪ್ರಮುಖ ಘೋಷಣೆ ಮಾಡಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಸಿಗುವವರೆಗೂ ಸರ್ಕಾರದಲ್ಲಿ ಅಧಿಕಾರದಲ್ಲಿ ಇರುವವರೆಗೂ ಪಂಚಮಸಾಲಿ ಸತ್ಯಾಗ್ರಹ ಮುಂದುವರೆಸುತ್ತೆವೆ ಎಂದು ಘೋಷಿಸಿದ್ದಾರೆ.

ಲಿಂಗಾಯತ ನಾಯಕರೆಂದು ತಿಳಿದುಕೊಂಡು ನಮ್ಮ ಸಮಾಜ ಇಪ್ಪತ್ತು ವರ್ಷಗಳ ಕಾಲ ಯಡಿಯೂರಪ್ಪನವರನ್ನು ನಂಬಿ ಮತವನ್ನು ಹಾಕಿದೆ. ಅದರೆ ಲಿಂಗಾಯತ ಸಮಾಜದಲ್ಲಿಯೇ ಅತ್ಯಂತ ಬಹು ದೊಡ್ಡ ಸಮಾಜವಾಗಿರುವ ಪಂಚಮಸಾಲಿಗಳು ಬೀದಿಯಲ್ಲಿ ನಿಂತು ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಸಿಎಂ ಬೊಮ್ಮಾಯಿ ಅವರು ನಮ್ಮಿಂದ ಮತ ಭಿಕ್ಷೆ ಬೇಡಿ ಅಧಿಕಾರದಲ್ಲಿದ್ದಾರೆ, ನಮ್ಮನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಶ್ರೀಗಳು, ಇವರನ್ನು ಹೇಗೆ ಲಿಂಗಾಯತ ನಾಯಕ ಎಂದು ಒಪ್ಪಲು ಸಾಧ್ಯ ಎಂದರು. ಇನ್ನು ಮುಂದೆ ಒಪ್ಪಲು ಸಮಾಜದವರಿಗೆ ಸಾಧ್ಯವಿಲ್ಲ. ಆದ್ದರಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರವರು ಇವರನ್ನು ನಂಬಿ ಚುನಾವಣೆಗೆ ಹೋದರೆ ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು. ಇವರು ಮೀಸಲಾತಿಗೆ ಮಾಡಿದ ಮೊಸದಿಂದ ನಮ್ಮ ಸಮಾಜದವರು ಅಸಮಾಧಾನಗೊಂಡಿದ್ದಾರೆ ಎಂದು ಶ್ರೀಗಳು ನುಡಿದರು.

ಬರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟ ನಿಲುವನ್ನು ಕೈಗೊಳ್ಳದಿದ್ದರೆ, ಮರುದಿನವೇ ತುರ್ತು ಸಭೆ ಸೇರಿ , ಯಾವ ದಿನಾಂಕದಂದು ಯಾವ ಭಾಗಗಳಲ್ಲಿ ರಾಜ್ಯ ಯಾತ್ರೆ ಹೋರಡಬೇಕು, ಯಾವ ವ್ಯಕ್ತಿಗಳನ್ನು ಬೆಂಬಲಿಸಬೇಕು, ಹಾಗೂ ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸಬೆಕೊ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು.

ಪಕ್ಷಾತಿತವಾಗಿ ಚುನಾವಣೆ ಬಗ್ಗೆ ಮಾಹಿತಿ ಪಡೆಯಲು ದಾನಪ್ಪ ಗೌಡರು ಹಾಗೂ ಚುನಾವಣೆ ಪ್ರಚಾರ ಮಾಡಲು ಬಿಎಸ್ ಪಾಟೀಲ್ ನಾಗರಳ್ ಹುಲಿ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.ಇದೇ ವೇಳೆ, ಎರಡು ವರ್ಷ ಎರಡು ತಿಂಗಳ ಪಂಚಮಸಾಲಿ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ಐತಿಹಾಸಿಕ ಚಳುವಳಿಯನ್ನು ಬೆಂಬಲಿಸಿ ನಡೆದ ತಮಟೆ ಚಳವಳಿ ಗಮನಸೆಳೆಯಿತು.