ಬೆಳಗಾವಿ : ಕಳೆದ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ-2023 ರಲ್ಲಿ ಉತ್ತರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರಾಭವಕ್ಕೆ ಪ್ರತಿಪಕ್ಷಕ್ಕಿಂತ ಬಿಜೆಪಿ ಒಳ ಹೊಡೆತವೇ ಪ್ರಮುಖ ಕಾರಣ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿರುವುದು ಹಳೆಯ ವಿಷಯ. ವಿಧಾನ ಸಭೆಯ ಚುನಾವಣೆ ಫಲಿತಾಂಶ ಲೋಕಸಭೆ ಸಭೆ ಚುನಾವಣೆಯಲ್ಲಿ ಮರುಕಳಿಸಲಿದೆ ಎನ್ನಲಾಗುತ್ತಿದೆ.
ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಳಯದಲ್ಲಿನ ಅಸಮಾಧಾನ ಹಾಗೂ ಒಳ ಪೆಟ್ಟಿನಿಂದ ಡಾ. ರವಿ ಪಾಟೀಲ ಅವರಿಗೆ ಆದ ಗಾಯ ಇದುವರೆಗೆ ಹಸಿ ಇದೆ. ಅದೇ ರೀತಿಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿನ ಹಲವು ನಾಯಕರ ಬದಲಿಗೆ ನಾಗೇಶ ಮನ್ನೋಳಕರ ಅವರಿಗೆ ಟೀಕೆಟ್ ನೀಡಿದ್ದಕ್ಕೆ ಅಸಮಾಧಾನ ಇತ್ತಾದರೂ ಕಾಟಾಚಾರಕ್ಕೆ ಪ್ರಚಾರದಲ್ಲಿ ತೋಡಗಿದ್ದರು.
ಅದೇ ರೀತಿಯಲ್ಲಿ ಜಗದೀಶ ಶೆಟ್ಟರ ಅವರಿಗೂ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಸಮುದಾಯದ ವ್ಯಕ್ತಿಯ ಗೆಲುವಿಗೆ ಸಹಕರಿಸಲಿದ್ದಾರೆ ಎಂಬ ಚರ್ಚ ಜೋರಾಗಿದೆ. ಅದರಲ್ಲೂ ಜಗದೀಶ ಶೆಟ್ಟರ ಅವರ ದಿನನಿತ್ಯದ ಕಾರ್ಯ ಚಟುವಟಿಕೆ ನಡೆಸುತ್ತಿರುವ ಸ್ವಯಂ ಘೋಷಿತ ನಾಯಕರ ಮೇಲೆ ಭಾರೀ ಪ್ರಮಾಣದ ಅಸಮಾಧಾನ ಇದೆ.
ಇಲ್ಲಿನ ಸ್ವಯಂ ಘೋಷಿತ ನಾಯಕರ ಮೇಲಿನ ಅಸಮಾಧಾನ ಬೆಂಕಿ ಜಗದೀಶ ಶೆಟ್ಟರ ಅವರ ರಾಜಕೀಯ ಭವಿಷ್ಯವನ್ನು ಸುಟ್ಟು ಭಸ್ಮ ಮಾಡಲಿದೆ ಎಂಬ ಆತಂಕ ನಿಷ್ಠಾವಂತ ಕಾರ್ಯಕರ್ತರಲ್ಲಿ ಚರ್ಚೆ ನಡೆಸಿದೆ.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಗೆಲವು ಸಾಧಿಸುವತ್ತೇವೆ ಎಂಬ ಭ್ರಮೆಯಲ್ಲಿರುವ ಬಿಜೆಪಿ ಅಭ್ಯರ್ಥಿಗೆ ಮಾತ್ರ ತಮ್ಮ ಹಿಂದೆ ನಡೆಯುತ್ತಿರುವ ಕರಾಮತ್ತಿನ ಕುರಿತು ಗಮನಕ್ಕೆ ಬರುತ್ತಿಲ್ಲ. ಅಲ್ಲದೇ ಮೋದಿ ಅಲೆಯಲ್ಲಿ ಗೆಲವು ಸಾಧಿಸುವ ಹಗಲುಗನಸ್ಸಿನಲ್ಲಿರುವ ಬಿಜೆಪಿ ಅಭ್ಯರ್ಥಿಗಳು, ಮೋದಿ, ಶಾ ಅವರು ಕಳೆದ ವಿಧಾನ ಸಭೆಯಲ್ಲಿ ಪ್ರಚಾರ ನಡೆಸಿದ್ದು, ನಂತರದ ಫಲಿತಾಂಶ ಇದುವರೆಗೆ ಬಿಜೆಪಿಯನ್ನು ಎದ್ದು ನಿಲ್ಲದಂತೆ ಮಾಡಿದೆ ಎಂಬುವುದನ್ನು ಅರಿತುಕೊಳ್ಳಲಿ