This is the title of the web page
This is the title of the web page

ಖಾಕಿ ಬಲೆಗೆ ಬಿದ್ದ ಭರ್ಜರಿ ಕುಳ : 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಂಡು ದಂಗಾದ ಪೊಲೀಸ್‌ ರು

ಖಾಕಿ ಬಲೆಗೆ ಬಿದ್ದ ಭರ್ಜರಿ ಕುಳ : 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಂಡು ದಂಗಾದ ಪೊಲೀಸ್‌ ರು

 

ಹಾವೇರಿ: ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹಾವೇರಿ ಹೊರವಲಯದ ಅಜ್ಜಯ್ಯಗುಡಿ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿಯಿಂದ ಹಾವೇರಿ, ದಾವಣಗೆರೆ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿ ಆಭವರಣ ಹಾಗೂ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ ಸುಮಾರು 11 ಕೆಜೆಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನ ಸಾಗಿಸಲಾಗುತ್ತಿತ್ತು. ಇದರ ಒಟ್ಟು ಮೌಲ್ಯ 6 ಕೋಟಿ 90 ಲಕ್ಷ ರೂಪಾಯಿ ಆಗಿದೆ. ವಾಹನ ಪರಿಶೀಲನೆ ವೇಳೆ ಪತ್ತೆಯಾದ ಆಭರಣಗಳು ಮತ್ತು ಸಾಗಾಟ ಮಾಡಲು ಬಳಕೆ ಮಾಡಿದ್ದ ವಾಹನವನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಗಾಟಗಾರರಲ್ಲಿ ಆಭರಣಗಳ ಖರೀದಿಸಿದ ಬಿಲ್​ಗಳು ಇವೆ. ಅದರೆ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಮಾತ್ರವಲ್ಲದೆ, ನಿಖರವಾಗಿ ಚಿನ್ನಾಭರಣಗಳನ್ನ ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನುವ ದಾಖಲೆ ಇಲ್ಲ. ಸದ್ಯ ಜಪ್ತಿ ಮಾಡಲಾದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ಒಪ್ಪಿಸಲಾಗಿದೆ.