ಬೆಳಗಾವಿ : ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಚುನಾಣೆಯ ಪ್ರಚಾರದಲ್ಲಿ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ಕುರಿತು ಚರ್ಚೆಯಾಗದೆ, ಕೇವಲ ಜಾತಿ ಜಗಳವೇ ಹೆಚ್ಚಾಗಿದೆ. ಇದಕ್ಕೆ ಕಾರಣ ಧಾರವಾಡದಿಂದ ಬೆಳಗಾವಿಗೆ ವಲಸೆ ಬಂದಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಸ್ಪರ್ಧೆಯೇ ಕಾರಣ ಎಂಬುವುದು ಅಲ್ಲಗಳೆಯುವಂತಿಲ್ಲ.
ಹೌದು ದಿ. ಸುರೇಶ ಅಂಗಡಿ ಹಾಗೂ ಸಂಸದೆ ಮಂಗಲಾ ಅಂಗಡಿಯವರು ಬಣಜಿಗ ಸಮುದಾಯದವರಾಗಿದ್ದರೂ ಅವರನ್ನು ಲಿಂಗಾಯತ ನಾಯಕರಾಗಲಿ, ಸಮುದಾಯವಾಗಲಿ ಪ್ರತ್ಯೇಕವಾಗಿ ಕಂಡಿರಲಿಲ್ಲ. ಅಂಗಡಿ ಕುಟುಂಬದ ಸಜ್ಜನತೆ ಹಾಗೂ ಸರಳತೆಯ ರಾಜಕಾರಣ,ಇತ್ತಿಚಿಗೆ ದಾರಿ ತಪ್ಪುತ್ತಿರುವ ಇತರ ರಾಜಕಾರಣಿಗಳು ಮಾಗದರ್ಶವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಕುಟುಂಬವನ್ನು ಲಿಂಗಾಯತ ಸಮುದಾಯ ಕಡೆಗಣಿಸದೆ ತಮ್ಮೊಂದಿಗೆ ಮುನ್ನಡೆಸಿಕೊಂಡ ಹೋಗುತ್ತಿದ್ದರು.
ಬಣಜಿಗ ಸಮುದಾಯ ಜಗದೀಶ ಶೆಟ್ಟರವನ್ನು ಲಿಂಗಾಯತ ಸಮುದಾಯವಾಗಲಿ ಅಥವಾ ನಾಯಕರಾಗಿ ಒಪ್ಪಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್‌ನವರು ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವುದರ ಜತೆಗೆ ಲಿಂಗಾಯತ ಸಮುದಾಯವರು ಎಂಬ ಅಸ್ತ್ರವನ್ನು ಹೂಡಿದ್ದಾರೆ. ಈ ಅಸ್ತ್ರ ಕೇವಲ ಬಿಜೆಪಿ ಪಾಳಯದಲ್ಲಿ ಅಷ್ಟೇ ಅಲ್ಲದೇ ಲಿಂಗಾಯತ ಸಮುದಾಯದಲ್ಲಿ ಸಂಚಲನ ಮೂಡಿಸಿದೆ. ನಮ್ಮ ಸಮುದಾಯದ ನಾಯಕಿಯಾಗಿ ಹೊರಹೊಮ್ಮುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಬೆನ್ನೆಲುಬಾಗಿ ನಿಂತಲ್ಲಿ, ಸಮುದಾಯಕ್ಕೆ ಮತ್ತಷ್ಟು ಬಲ ಬರಲಿದೆ ಎಂಬ ಚರ್ಚೆಯೂ ಸಾರ್ವಜನಿಕ ಪಾಳಯದಲ್ಲಿ ಜೋರಾಗಿದೆ. ಅದರಲ್ಲೂ ಲಿಂಗಾಯತ ಸಮುದಾಯದ ಮತಗಳೆ ಹೆಚ್ಚಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೂಡಿರುವ ಲಿಂಗಾಯತ ಜಾತಿಯ ಅಸ್ತ್ರ ಎದುರಾಳಿ ಅಭ್ಯರ್ಥಿಗಳನ್ನು ಕಂಗೆಡಿಸುವಂತೆ ಮಾಡಿದೆ ಎಂಬುವುದನ್ನು ತಳ್ಳಿಹಾಕುವಂತಿಲ್ಲ..