This is the title of the web page
This is the title of the web page

ಬೆಳಗಾವಿ ಖಾಕಿ ಪಡೆ ಭರ್ಜರಿ ಬೇಟೆ: 27.34 ಲಕ್ಷ ರೂ. ಜಪ್ತಿ

ಬೆಳಗಾವಿ ಖಾಕಿ ಪಡೆ ಭರ್ಜರಿ ಬೇಟೆ: 27.34 ಲಕ್ಷ ರೂ. ಜಪ್ತಿ

 

ಬೆಳಗಾವಿ: ಬಸ್‍ನಲ್ಲಿ ಸಾಗಿಸುತ್ತಿದ್ದ 27.34 ಲಕ್ಷ ಹಣವನ್ನ ಬೆಳಗಾವಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ತಾಲೂಕಿನ ಬಾಚಿ ಚೆಕ್‍ಪೋಸ್ಟ್ ನಲ್ಲಿ ದಾಖಲೆ ಇಲ್ಲದೇ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಪಾಂಡುರಂಗ ಎಂಬವರು ಹಣ ಸಾಗಿಸುತ್ತಿದ್ದರು.
ಇತ್ತ ತಪಾಸಣೆಯ ಮಾಡುವ ಸಂದರ್ಭದಲ್ಲಿ ಟೂರಿಸ್ಟ್ ಬ್ಯಾಗ್‍ನಲ್ಲಿ 27 ಲಕ್ಷ 34 ಸಾವಿರ ಹಣ ಪತ್ತೆಯಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿಕೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.