This is the title of the web page
This is the title of the web page

ಅಥಣಿ: ದೊಡ್ಡಮ್ಮಳ ಮೇಲೆ ಮಗನಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಜೀವ

ಅಥಣಿ: ದೊಡ್ಡಮ್ಮಳ ಮೇಲೆ ಮಗನಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಜೀವ

 

ಬೆಳಗಾವಿ: ಬೈಕ್‌ ಕೀ ಕೊಡಲಿಲ್ಲ ಸಾಕಿದ ಮಗನೇ ಆಕ್ರೋಶಗೊಂಡು ದೊಡ್ಡಮ್ಮಳ ಮೇಲೆ ಮಾರಣಾಂತಿಕ ಹಲ್ಲೆ ಕೊಲೆ ಮಾಡಿರುವ ದುರ್ಘಟನೆ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.

ಬಲವಾದ ಪೇಟ್ಟು ಬಿದ್ದಿರುವುದರಿಂದ ಮಂಗಲ ತುಕಾರಾಮ ಸಾವಡಕರ (55) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರಿಳೆದಿದ್ದಾರೆ. ಸಂಜಯ ರಾಜಾರಾಮ ಸಾವಡಕರ (25) ಹಲ್ಲೆ ಆರೋಪಿ. ಸಂಜಯ ತಾಯಿ ಮರಣ ಬಳಿಕ ಈತನನ್ನು ತಮ್ಮ ದೊಡ್ಡಮ್ಮ ಸಾಕಿದಳು, ಆದರೆ, ಸಾಗಿದ ಮಗನೇ ಕೊಲೆ ಮಾಡಿರುವುದು ದುರಂತ ಎನ್ನಲಾಗಿದೆ.

ದೊಡ್ಡಮ್ಮಳು ಮಹಿಳೆ ಬಯಲು ಶೌಚಕ್ಕೆ ಹೋಗುವ ಮಾರ್ಗಮದ್ಯದಲ್ಲಿ ಕಿಡಿಗೇಡಿ ಕಬ್ಬಿಣದ ಸಲಾಕೆಯಿಂದ ಹಲ್ಲೆಮಾಡಿದ್ದಾನೆ. ಬಲ ಹೊಡೆದ್ದರಿಂದ 55 ವರ್ಷದ ತಾಯಿ ಮೃತಪಟ್ಟಿದ್ದಾಳೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಲೆ ಮರೆಸಿಕೊಂಡಿದ್ದ ಆರೋಪಿ ಸಂಜಯನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.