ಬೆಳಗಾವಿ: ಕಾಂಗ್ರೆಸ್ ಅಳೆದು-ತೂಗಿ 2 ನೇ ಪಟ್ಟಿ ಪ್ರಕಟ ಮಾಡುವಲ್ಲಿ ಎಡವಿದೆ ಎಂದು ಕೈ ನಾಯಕರು ಅಸಮಾಧಾನ ಹೋರಹಾಕಿದ್ದಾರೆ. ಟಿಕೆಟ್ ನೀರಿಕ್ಷೆಯಲ್ಲಿದ್ದ ನಾಯಕರಿಗೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಇತ್ತ ಅಖಾಡಕ್ಕ ಇಳಿಸಬೇಕಿದ್ದ ಕಾಂಗ್ರೆಸ್ ಮುಖಂಡರು ಪಕ್ಷ ತೊರೆಯುತ್ತಿದ್ದಾರೆ.
ಟಿಕೆಟ್ ಅಚ್ಚರಿ: ತೀವ್ರ ಬಂಡಾಯದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಅಭ್ಯರ್ಥಿಗಳ ಘೋಷಣೆಗೆ ವಿಳಂಬ ಮಾಡುತ್ತಿದೆ. ಗೋಕಾಕ, ಅಥಣಿ ಮತ್ತು ರಾಯಬಾಗ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯು ಕಾಂಗ್ರೆಸ್ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ , ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಕಾಯುತ್ತಿದೆ.
ಅಥಣಿ ಬಿಜೆಪಿ ಘಟಕದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್ಗಾಗಿ ಎರಡು ಗುಂಪುಗಳಾಗಿ ಹಂಚಿ ಹೋಗಿರುವುದು ಅಥಣಿಯಲ್ಲಿ ತನ್ನ ಅಭ್ಯರ್ಥಿ ಘೋಷಿಸಲು ಕಾಂಗ್ರೆಸ್ ವಿಳಂಬ ಮಾಡುವುದಕ್ಕೆ ಇನ್ನೊಂದು ಕಾರಣವಾಗಿದೆ. ಅಥಣಿ ಕ್ಷೇತ್ರದಲ್ಲಿ ಪ್ರಭಲ ಸಮುದಾಯದ ಹೊಂದಿರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕೈ ಮಾಸ್ಟರ್ ಮಾಡಿಕೊಂಡಿದ್ದು, ಮುಂದಿನ ನಡೆ ನಿಗೂಡವಾಗಿದೆ.
ಅಥಣಿ ಕ್ಷೇತ್ರಕ್ಕೆ 13 ಅಭ್ಯರ್ಥಿಗಳು ಪಕ್ಷದ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಥಣಿಯಿಂದ ರಾಜ್ಯ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕುಮಠಳ್ಳಿ ವಿರುದ್ಧ ಸೋತಿದ್ದ ಸ್ಥಳೀಯ ಮುಖಂಡ ಗಜಾನನ ಮಂಗಸೂಳಿ ಕಾಂಗ್ರೆಸ್ ಟಿಕೆಟ್ಗಾಗಿ ಮುಂಚೂಣಿಯಲ್ಲಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ನಾಯಕ ಎಸ್ಕೆ ಭೂತಾಳೆ ಕೂಡ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಂಚಮಸಾಲಿ ಲಿಂಗಾಯತ ಮುಖಂಡ ಧರೆಪ್ಪ ಟಕ್ಕಣ್ಣವರ್ ಅಥಣಿ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದು, ಲಕ್ಷ್ಮೀ ಹೆಬ್ಬಾಳ್ಕರ್, ಕಾಶಪ್ಪನವರ್ ಮತ್ತು ವಿನಯ್ ಕುಲಕರ್ಣಿ ಇವರಿಗೆ ಬೆಂಬಲ ನೀಡಿದ್ದಾರೆ ವಲಯದಲ್ಲಿ ಚರ್ಚೆಯಾಗುತ್ತಿವೆ.
ಬಂಡಾಯ ತಪ್ಪಿಸಲು ಕಾಂಗ್ರೆಸ್ ಜಾನ ನಡೆ ಇಡುತ್ತಿದೆ ಆದರೂ, ಪಕ್ಷಕ್ಕಾಗಿ ದುಡಿದ ಮುಖಂಡರು ತಮಗೂ ಒಂದು ಅವಕಾಶ ನೀಡಿ ಎಂದು ಮನವರಿಕೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ ಮಾಡುವ ತವಕದಲ್ಲಿದೆ. ಇದರಲ್ಲಿ ಎಷ್ಟು ಬಂಡಾಯ ಎಳುತ್ತದೆ ಎಂಬುವುದೇ ಅಚ್ಚರಿ ಆಟ.