ಬೆಳಗಾವಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ ಸಾವಿರಾರು ರುಪಾಯಿ ಮೌಲ್ಯದ ವಿವಿಧ ಕಂಪನಿಯ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದ ಜಾಧವ ಗಲ್ಲಿಯ ಕುಮಾರ ದೇವಪ್ಪಾ ಲೋಕುರ (23) ಹಾಗೂ ಹಿಂಡಲಗಾ ಗ್ರಾಮದ ಸಮರ್ಥ ಕಾಲೋನಿಯ ಸಂತೋಷ ರಾಮಚಂದ್ರ ಗೊಜಗೇಕರ (43) ಬಂಧಿತರು.
ನಂದಿಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಶಂಕರ ಲೋಕುರನನ್ನು ಬಂಧಿಸಿ 27.200ಲೀಟರ್ ವಿವಿಧ ಕಂಪನಿಯ ಮದ್ಯ ಹಾಗೂ 1200 ನಗದು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂಡಲಗಾ ಗ್ರಾಮದಲ್ಲಿ ದಾಳಿ ನಡೆಸಿ ಸಂತೋಷ ಗೊಜಗೇಕರನನ್ನು ಬಂಧಿಸಿ 17.820 ಲೀಟರ್ ವಿವಿಧ ಕಂಪನಿಯ ಮದ್ಯ ಹಾಗೂ ₹500ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ