ಕೈ ಹಿಡಿಯಲಿರುವ ಸವದಿ: ಸುವರ್ಣಲೋಕ ದಿನಪತ್ರಿಕೆ ಆಂತರಿಕ ವಿಶ್ಲೇಷಣೆ?
ಸವದಿಯನ್ನು ಕೈ ಬಿಟ್ಟ ಹಿನ್ನಲೆಯಲ್ಲಿ ಮತ್ತಷ್ಟೂ ರಬೆಲ್, ನಂಬಿಕೆ ದ್ರೋಹಿ ಯಡಿಯೂರಪ್ಪ
ಬೆಳಗಾವಿ: ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದು ಬಹುತೇಕ ದಟ್ಟವಾಗಿದ್ದು, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಟ್ಟಿ ಬೆಳೆಸಿದ ಮಹಾನ್ ನಾಯಕರನ್ನು ಬಿಜೆಪಿ ಹೈಕಮಾಂಡ್ ತುಳಿಯುವ ಯತ್ನಕ್ಕೆ ಕೈ ಹಾಕಿದೆ. ಹೀಗಾಗಿ ನಮ್ಮ ಭವಿಷ್ಯಕ್ಕಾಗಿ ಶೀಘ್ರವೇ ನಿರ್ಧಾರ ತಿಳಿಸಲಾಗುವುದು ಎಂದು ಸವದಿ ಮಾದ್ಯಮಗಳ ಮುಂದೆ ಮಾರ್ಮಮಿಕವಾಗಿ ನುಡಿದ್ದಾರೆ.
ಸುವರ್ಣಲೋಕ ದಿನಪತ್ರಿಕೆ ಆಂತರಿಕ ವಿಶ್ಲೇಷಣೆ ಸತ್ಯ:
ಟಿಕೆಟ್ ವಂಚಿತರಾಗಿದ ಹಿನ್ನಲೆಯಲ್ಲಿ ಕೈ ಹಿಡಿಯಲಿರುವ ಸವದಿ ಎಂದು ಸುವರ್ಣಲೋಕ ದಿನಪತ್ರಿಕೆ ಆಂತರಿಕ ವಿಶ್ಲೇಷಣೆ ಮೂಲಕ ಓದುಗರಿಗೆ ತಿಳಿಸಲಾಗಿತ್ತು. ಯಡಿಯೂರಪ್ಪ ಅವರು ತಮಗೆ ಟಿಕೆಟ್ ದೊರಕಿಸಿಕೊಡಿಸುವುದಾಗಿ ನೀಡಿದ್ದ ಭರವಸೆ ನೀಡಿದರು. ಅದಕ್ಕಾಗಿ ತಾಳ್ಮೆಯಿಂದ ಕುಳಿತಕೊಂಡಿದ್ದು, ಆ ತಾಳ್ಮೆ ಇಲ್ಲ ನಿಮ್ಮಿಂದ ಭವಿಷ್ಯ ಹಾಳಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಬಿಜೆಪಿ ಮಂಗಳವಾರ ಪ್ರಕಟಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟಿದ್ದರಿಂದ ದುಃಖದಿಂದ ಭಾವುಕರಾದ ಸವದಿ ಸಭೆಯೊಂದರಲ್ಲಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.
ನಂಬಿಕೆ ದ್ರೋಹಿ ಎಂದು ಯಡಿಯೂರಪ್ಪ
ತಮಗೆ ಅಧಿಕಾರ ಹಸ್ತಾಂತರಮಾಡದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು “ವಂಚಕ, ನಂಬಿಕೆ ದ್ರೋಹಿ ಎಂದು ಯಡಿಯೂರಪ್ಪ ಮತ್ತು ಬಿಜೆಪಿಯವರು ಕರೆದಿದ್ದರು. ಈಗ ಯಡಿಯೂರಪ್ಪ ನನಗೂ ಅದನ್ನೇ ಮಾಡಿದ್ದಾರೆ. ನಂಬಿಸಿ ವಂಚಿಸಿದ್ದಾರೆ” ಎಂದು ಹೇಳಿದರು.
ಪ್ರಬಲ ನಾಯಕ: ಬಿಜೆಪಿಯಲ್ಲಿ ಡಿಸಿಎಂ , ಬಿಜೆಪಿ ಉಪಾಧ್ಯಕ್ಷ ಅಧಿಕಾರಿ ಆಳಿದ ಸವದಿಯನ್ನು ಕೈ ಬಿಟ್ಟ ಹಿನ್ನಲೆಯಲ್ಲಿ ಮತ್ತಷ್ಟೂ ರಬೆಲ್ ಆಗಿದ್ದಾರೆ. ಕೆಲವು ತಿಂಗಳ ಹಿಂದಿನಿಂದ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹೀಗಾಗಿ ಕೈ ಹಿಡಿಯುವುದು ಬುತೇಕ ದಟ್ಟವಾಗಿದೆ.