This is the title of the web page
This is the title of the web page

ಎಬಿಪಿ ನ್ಯೂಸ್ ಸಿವೋಟ ರ್ಪೂರ್ವ ಸಮೀಕ್ಷೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿ 73 ರಿಂದ 85 ಕಾಂಗ್ರೆಸ್ 110 ರಿಂದ 122  ಜೆಡಿಎಸ್ 21 ರಿಂದ 29

ಎಬಿಪಿ ನ್ಯೂಸ್ ಸಿವೋಟ ರ್ಪೂರ್ವ ಸಮೀಕ್ಷೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿ 73 ರಿಂದ 85 ಕಾಂಗ್ರೆಸ್ 110 ರಿಂದ 122  ಜೆಡಿಎಸ್ 21 ರಿಂದ 29

 

ಬೆಂಗಳೂರು, ಮೇ. 07: ಕರ್ನಾಟಕ ಚುನಾವಣೆಗೆ ಕೆಲವೇ ದಿನಗಳಿರುವಾಗ, ಎಬಿಪಿ ನ್ಯೂಸ್ ಸಿವೋಟರ್ ಸಹಯೋಗದೊಂದಿಗೆ ಮತದಾರನ ಮನಸ್ಥಿತಿಯನ್ನು ಅಳೆಯಲು ಅಂತಿಮ ಸಂಗ್ರಹವನ್ನು ನಡೆಸಿದೆ. ಸಮೀಕ್ಷೆಯ ಫಲಿತಾಂಶಗಳನ್ನು ಭಾನುವಾರ ಬಿಡುಗಡೆ ಮಾಡಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10ರ ಬುಧವಾರ ಮತದಾನ ನಡೆಯಲಿದೆ. ಮತದಾನಕ್ಕೆ 4 ದಿನಗಳ ಮೊದಲು ಎಬಿಪಿ ನ್ಯೂಸ್ ಸಿವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಕೂಡ ಸರ್ಕಾರ ರಚಿಸುವ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಮತ್ತು ಚುನಾವಣಾ ಭವಿಷ್ಯವು ತಮ್ಮ ಪರವಾಗಿರಲಿದೆ ಎಂದು ಹೇಳಿದೆ. ಜೆಡಿಎಸ್ ಕೂಡ ಸರ್ಕಾರ ರಚನೆ ಮಾಡುವ ವಿಶ್ವಾಸ ತೋರಿಸುತ್ತಿದೆ.

ರಾಜ್ಯವು 224 ಸದಸ್ಯರ ವಿಧಾನಸಭೆಯನ್ನು ಹೊಂದಿದೆ. ಜಾತ್ಯತೀತ ಜನತಾ ದಳ ಮೂರನೇ ಪ್ರಮುಖ ರಾಜಕೀಯ ಪಕ್ಷವಾಗಿದ್ದು, 28 ಶಾಸಕರನ್ನು ಹೊಂದಿದೆ. ಬಿಜೆಪಿ ಪ್ರಸ್ತುತ 119 ಸ್ಥಾನಗಳನ್ನು ಹೊಂದಿದೆ, ಕಾಂಗ್ರೆಸ್ 75 ಸ್ಥಾನಗಳೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದೆ. ವಿಧಾನಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ. ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಎಬಿಪಿ ನ್ಯೂಸ್ – ಸಿವೋಟರ್ ಸಮೀಕ್ಷೆ ಫಲಿತಾಂಶ
ಕರ್ನಾಟಕ ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ, ಎಬಿಪಿ-ಸಿವೋಟರ್ ಸಮೀಕ್ಷೆಯ ಫಲಿತಾಂಶಗಳು ಆಡಳಿತರೂಢ ಬಿಜೆಪಿ 73 ರಿಂದ 85 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ತೋರಿಸಿದೆ. ಪ್ರತಿಪಕ್ಷ ಕಾಂಗ್ರೆಸ್ 110 ರಿಂದ 122 ಸ್ಥಾನಗಳನ್ನು ಗಳಿಸಲಿದೆ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿ ಹೇಳಿದೆ.

ಭಾನುವಾರ ಬಿಡುಗಡೆ ಲೋಕ್‌ಪೋಲ್ ಸಮೀಕ್ಷೆಯ ಫಲಿತಾಂಶದಂತೆಯೇ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಬಹುಮತದಿಂದ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದೆ. ಎಬಿಪಿ ನ್ಯೂಸ್ – ಸಿವೋಟರ್ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ 59 ರಿಂದ 65 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 129 ರಿಂದ 134 ಸ್ಥಾನಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ ಪಕ್ಷ 23 ರಿಂದ 28 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.