ಕಿತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಹರಿದ ಟಂಟಂ: ಸ್ಥಳದಲ್ಲೆ ಯುವತಿ ಸಾವು

ಕಿತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಹರಿದ ಟಂಟಂ: ಸ್ಥಳದಲ್ಲೆ ಯುವತಿ ಸಾವು

 

ಬೆಳಗಾವಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಟಂಟಂ ವಾಹನ ಡಿಕ್ಕಿ ಹೊಡೆದಿದ್ದು, ಗಂಭೀರಗಾಯಗೊಂಡು ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಉಗರಖೋಡ ಗ್ರಾಮದ ಕಾವೇರಿ ಕಾಜಗಾರ (21) ಯುವತಿ. ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಕಾಲೇಜ ಮುಗಿಸಿಕೊಂಡು ಮನೆಗೆ ಮರಳಿ ಕಡೆಗೆ ಹೊರಟಿದ್ದಳು. ಏಕಾಏಕಿ ಹಿಂದಿನಿಂದ ಟಂಟಂ ವಾಹನ ಬಂದು ವಿದ್ಯಾರ್ಥಿನಿ ಮೇಲೆಯೇ ಹರಿದಿದೆ. ಸ್ಥಳದಲ್ಲೆ ಕುಸಿದು ಬಿದ್ದು ಯುವತಿ ಮೃತಪಟ್ಟಿದ್ದಾಳೆ.

ಆರೋಪಿ ವಾಹನ ಚಾಲಕ ದೇವಗಾಂವ್ ಗ್ರಾಮದ ಅನಿಲ್ ಚಿವುಟಗುಂಡಿಯನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.