ಬೈಕ್‌ ಬಸ್‌ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೆ ಉಸಿರು ಚೆಲ್ಲಿದ ಯುವಕ

ಬೈಕ್‌ ಬಸ್‌ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೆ ಉಸಿರು ಚೆಲ್ಲಿದ ಯುವಕ

 

ಬೆಳಗಾವಿ: ಬೈಕ್‌ ಗೆ ಸಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ತೀವ್ರ ರಸ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ನಿಟ್ಟೂರ ಬಳಿ ನಡೆದಿದೆ.

ತಾಲೂಕಿನ ಕರವಿನಕೊಪ್ಪ ಗ್ರಾಮದ ಲಕ್ಷ್ಮಣ ಪೂಜಾರಿ( 23) ಮೃತ ಯುವಕ. ಬೆಳಗಾವಿಯಿಂದ ಖಾನಾಪೂರ ಕಡೆಗೆ ಹೊರಟ್ಟಿದ್ದ ಸಾರಿಗೆ ಬಸ್‌ ಬೆಳಗಾವಿಯತ್ತ ಹೊರಟ್ಟಿದ್ದ ಬೈಕ್‌ ಗೆ ಡಿಕ್ಕಿ ಹೊಡೆದಿದ್ದು, ಯುವಕ ಸ್ಥಳದಲ್ಲೆ ಕೊನೆಯುಸಿರೆಳಿದಿದ್ದಾನೆ.

ಖಾನಾಪೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.