ಎತ್ತಿನ ಬಂಡಿಗೆ ಬೀಕರ ಅಪ್ಪಳಿಸಿದ ಕಾರು ವಾಹನ: ಓರ್ವ ಮಹಿಳೆ ಸಾವು, ನಾಲ್ವರು ಗಂಭೀರ ಗಾಯ

ಎತ್ತಿನ ಬಂಡಿಗೆ ಬೀಕರ ಅಪ್ಪಳಿಸಿದ ಕಾರು ವಾಹನ: ಓರ್ವ ಮಹಿಳೆ ಸಾವು, ನಾಲ್ವರು ಗಂಭೀರ ಗಾಯ

 

ಬೆಳಗಾವಿ: ಎತ್ತಿನ ಬಂಡಿಯ ಮೇಲೆ ವಾಹನ ಹರಿದು ನಾಲ್ವರು ರೈತ ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಬೆಳಗಾವಿ- ಬಾಗಲಕೋಟ ರಾಜ್ಯ ಹೆದ್ದಾರಿಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಯಮನವ್ವ ಮಾಯಪ್ಪ ಮಡ್ಡಿ (42)ಮೃತ ಮಹಿಳೆ. ಅಡಿವಪ್ಪ ಬರಮಪ್ಪ ಜೀರಗಾಳ, ಸುರೇಶ್ ಮಾಯಪ್ಪ ಮಡ್ಡಿ, ಮಂಜುಳಾ ಅಡಿವೆಪ್ಪ ಜೀರಗಾಳ, ಶಿವಕ್ಕ ಬರಮಪ್ಪ ಜೀರಗಾಳ ಗಾಯಗೊಂಡ ರೈತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಎತ್ತಿನ ಬಂಡಿಯಲ್ಲಿ ರೈತರು ಬೆಳಗಿನ ಜಾವ ಜಮೀನಿಗೆ ಕೆಲಸಕ್ಕೆ ಹೋಗುವಾಗ ಹಿಂಬದಿಯಿಂದ ವಾಹನ ಬೀಕರವಾಗಿ ಅಪ್ಪಳಿದ್ದು, ಬಂಡಿಯಲ್ಲಿದ್ದ ನಾಲ್ವರು ಕೆಳಗೆ ಬಿದ್ದು ಪೆಟ್ಟಾಗಿವೆ. ಓರ್ವ ಮಹಿಳೆ ಮೃತಪಟ್ಟಿದ್ದಾಳೆ. ಎತ್ತುಗಳು ಗಾಯಗೊಂಡಿವೆ ಎನ್ನಲಾಗಿದೆ.

ಕಟಕೋಳ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.