ವಿಶೇಷ ವರದಿ
ಸುರೇಶ ನೇಲ್ಲಿ೯
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ 10 ದಿನಗಳ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಸೌಧಕ್ಕೆ ಸುಣ್ಣ, ಬಣ್ಣ ಬಳಿದು ಮದುವನಗಿತಿಯಂತೆ ಅಲಂಕರಿಸಲಾಗಿದೆ.
ಸರ್ಕಾರದ ಸೂಚನೆಯಂತೆ ಎಸ್ವಿಎಸ್ನ ಆಂತರಿಕ ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದ್ದು, ಕಟ್ಟಡದ ಹೊರಗೆ ಅಗತ್ಯವಿರುವ ಇತರ ವ್ಯವಸ್ಥೆಗಳಿಗೆ ಸಿದ್ಧತೆಗಳು ನಡೆಯುತ್ತಿವೆ.
ಅಧಿವೇಶನಕ್ಕೆ ರಾಜ್ಯ ಸರ್ಕಾರವೇ ಬೆಳಗಾವಿಗೆ ಸ್ಥಳಾಂತರಗೊಳ್ಳಲಿರುವುದರಿಂದ ಭದ್ರತೆ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ
ಒಂದೆಡೆ ವಿವಿಧ ಸಚಿವರು, ಹಿರಿಯ ಅಧಿಕಾರಿಗಳು ಆಗಮಿಸಿದರೆ, ಮತ್ತೊಂದೆಡೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪ್ರತಿಭಟನಾಕಾರರು ಆಗಮಿಸಲಿದ್ದಾರೆ.
11 ಸಮಿತಿಗಳನ್ನು ರಚಿಸಲಾಗಿದೆ
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಅಧಿವೇಶನ ನಿರ್ವಹಣೆಗೆ 11 ಸಮಿತಿಗಳನ್ನು ರಚಿಸಲಾಗಿದ್ದ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಬೆಳಗಾವಿಯ 75 ಹೋಟೆಲ್ಗಳಲ್ಲಿ 2,000ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಿದೆ. ಹೋಟೆಲ್ ಮಾಲೀಕರೊಂದಿಗೆ ಎರಡು ಬಾರಿ ಸಭೆ ನಡೆಸಿ ಸಲಹೆಗಳನ್ನು ನೀಡಿದೆ.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಮತ್ತು ಸಹಾಯಕ ಆಯುಕ್ತರ ನೇತೃತ್ವದ ತಂಡವು ಕಾರ್ಡನ್ ಮತ್ತು ಪ್ರತಿಭಟನಾ ಸ್ಥಳಗಳ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ.
ಬೆಚ್ಚಗಿನ ಬಟ್ಟೆ ತನ್ನಿ:
‘ ಬೆಳಗಾವಿಯಲ್ಲಿ ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಬರುವವರು ಸ್ವೆಟರ್, ಬೆಚ್ಚನೆಯ ಬಟ್ಟೆ ತರುವುದನ್ನು ಮರೆಯಬಾರದು ಎಂದು ಬೆಳಗಾವಿಯ ಜನರು ಸಲಹೆ ನೀಡುತ್ತಿದ್ದಾರೆ.