ಬೆಳಗಾವಿ: ಜನ್ಮದಿನದ ಕಾರ್ಯಕ್ಕೆ ಆರ್ಡರ್ ಮಾಡಲಾಗಿದ್ದ ಬಿರ್ಯಾನಿ ಸರಿಯಾದ ಸಮಕ್ಕೆ ಬರಲಿಲ್ಲ ಎಂದು ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದಿದ್ದು, ಎರಡು ಗುಂಪುಗಳಿಂದ ದೂರು, ಪ್ರತಿದೂರು ದಾಖಲಾಗಿದೆ.
ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಸಚೀನ ಲಕ್ಷ್ಮಣ ದಡ್ಡಿ ಸೇರಿದಂತೆ ಇನ್ನೂ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗಲಾಟೆಯಲ್ಲಿ ಗಾಂಧಿ ನಗರದ ಸಲೀಂ ನದಾಫ, ಮುಸ್ತಾಕ ದಸ್ತಗಿರ ದಾವಣಗೇರೆ, ಅಮನ ನಗರದ ಅಫ್ಜಲ್ ಮಹಮ್ಮದಸಾಬ ಸಯ್ಯದ ಎಂಬುವರಿಗೆ ಗಾಯವಾಗಿದ್ದರಿಂದ ದೂರು ದಾಖಲಾಗಿದೆ. ಇನ್ನೂ ಸಚೀನ ದಡ್ಡಿ ಕಡೆಯಿಂದಲೂ ದೂರುದಾರರ ವಿರುದ್ಧ ಅಟ್ರಾಸಿಟಿ ಕುರಿತು ಪ್ರತಿದೂರು ದಾಖಲಾಗಿದೆ.
ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಸಚೀನ್ ದಡ್ಡಿ ಎಂಬುವವರ ಹುಟ್ಟು ಹಬ್ಬ ಇರುವುದರಿಂದ ಬೆಳಗಾವಿಯ ಗಾಂಧೀ ನಗರದ ಸಲೀಂ ನದಾಫ್ ಎಂಬುವವರಿಗೆ 200 ಬಿರ್ಯಾನಿ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆಗೆ ಬಿರ್ಯಾನಿ ಬರಬೇಕಾಗಿತ್ತು ರಾತ್ರಿ 11 ಗಂಟೆಯಾದರು ಬಿರ್ಯಾನಿ ಬರಲಿಲ್ಲ. ಇದರಿಂದ ಜನ್ಮ ದಿನದ ಶುಭಾಶಯ ಕೋರಲು ಆಗಮಿಸಿದ್ದವರ ಮುಂದೆ ಮುಜುಗರವಾಗಿದ್ದರಿಂದ ಅಸಮಾಧಾನಗೊಂಡ ಸಚೀನ ದಡ್ಡಿ ಕಡೆಯವರು ಬಿರ್ಯಾನಿ ತಡ ಆಗಿದೆ ಎಂದು ಗಲಾಟೆ ಶುರು ಮಾಡಿದ್ದಾರೆ. ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.