This is the title of the web page
This is the title of the web page

ಸವದಿಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಕಾಗೆ

ಸವದಿಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಕಾಗೆ

 

ಬೆಳಗಾವಿ: ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಗೆ ಆಗಮನಕ್ಕೆ ಬಹಳ ಕುತೂಹಲ ಇದೆ. ಅವರು ಬಂದರೆ ಸವದಿಗಾಗಿ ನಾನು ಯಾವ ತ್ಯಾಗ ಮಾಡಲು ಸಿದ್ಧ ಎಂದು ಮಾಜಿ ಶಾಸಕ ರಾಜು ಕಾಗೆ ಹೇಳಿದರು.

ಅಥಣಿಯಲ್ಲಿರುವ ಲಕ್ಷ್ಮಣ ಸವದಿ ಅವರ ಮನೆಗೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸವದಿ ಅವರ ನನ್ನದು 40 ವರ್ಷಗಳ ಒಟನಾಟವಿದೆ. ರಾಜಕೀಯದಲ್ಲಿ ಅವರು ತೋರಿಸಿದ ಹಾದಿಯಲ್ಲಿ ನಡೆದಿದ್ದೆವೆ. ಬಿಜೆಪಿ ಪಕ್ಷದಲ್ಲಿನ ಬೆಳವಣಿಗೆ ಕಂಡು ಆತಂಕವಾಗಿದೆ. ಹೀಗಾಗಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದರೆ ಸಂತೋಷ ಅವರಿಗಾಗಿ ಯಾವ ತ್ಯಾಗ ಸಿದ್ಧವಾಗಿದ್ದಾವೆ ಎಂದರು ಹೇಳಿದರು.

ಸದ್ಯ ನಾನು ನನ್ನ ಕ್ಷೇತ್ರದಲ್ಲಿ ಒಂಟೆತ್ತು ಆಗಿರವದರಿಂದ ಅಭಿವೃದ್ದಿ ಎಂಬ ಬಂಡೆ ಎಳೆಯಲು ಸಾಧ್ಯವಾಗುತ್ತಿಲ್ಲ. ಸದ್ಯ ಸವದಿ ಎಂಬ ಇನ್ನೊಂದು ಎತ್ತು ನನ್ನೊಂದಿಗೆ ಕೂಡಿದರೆ ಕ್ಷೇತ್ರ ಅಭಿವೃದ್ಧಿ ಮಾಡುವದರಲ್ಲಿ ಎರಡು ಮಾತ್ತಿಲ್ಲ ಎಂದು ಹೇಳಿದರು.

ಸದ್ಯ ಕಾಂಗ್ರೆಸ್‌ ಸೇರುವ ಕುರಿತು ಒಂದು ಸುತ್ತಿನ ಮಾತುಕಥೆಯಾಗಿದೆ. ಸವದಿ ಅವರ ಜತೆ ಮಾತನಾಡಿ ಎಂದು ಯಾರಿಂದಲೂ ಕರೆ ಬಂದಿಲ್ಲ. ಸವದಿ ಅವರು ನನ್ನ ಆತ್ಮಿಯ ಸ್ನೇಹಿತರಾಗಿರುವದರಿಂದ ಅವರ ಭೇಟಿಗೆ ಬಂದಿದ್ದೇನೆ ಅಷ್ಟೆ ಎಂದು ಹೇಳಿದರು.