ಬೆಳಗಾವಿ: ಗೋಕಾಕಿನ 23 ವರ್ಷದ ಯುವಕನೋರ್ವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಷಪ್ರಾಶನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ( ಮದ್ಯಾಹ್ನ) ನಡೆದಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕಾಕ ತಾಲೂಕಿನ ಲಗಮೇಶ್ವರ ಗ್ರಾಮದ ನಿವಾಸಿ ಕುಮಾರ್ ಕಲ್ಲಪ್ಪ ಕೊಪ್ಪದ (23) ಆತ್ಮಹತ್ಯೆಗೆ ಯತ್ನಿಸಿದ ಯುವಕ. ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಯುವಕ ಜಿಲ್ಲಾಧಿಕಾರಗಳು ಕಚೇರಿಯಲ್ಲಿ ಇಲ್ಲವೆಂದು ಊಹಿಸಿ ಜತೆಗೆ ತಂದಿದ್ದ ವಿಷಪ್ರಾಶನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.ಆದರೆ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.