ಐಎಲ್‌ವೈಎಫ್ ವೀರಶೈವ ಲಿಂಗಾಯತ ಗೊಬಲ್ ಬಿಸಿನೆಸ್ ಕಾಂಕ್ಷೇವ್ 2026: ಜನವರಿ 29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನಲ್ಲಿ ಆಯೋಜನೆ

ಐಎಲ್‌ವೈಎಫ್ ವೀರಶೈವ ಲಿಂಗಾಯತ ಗೊಬಲ್ ಬಿಸಿನೆಸ್ ಕಾಂಕ್ಷೇವ್ 2026: ಜನವರಿ 29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನಲ್ಲಿ ಆಯೋಜನೆ

ಬೆಳಗಾವಿ. ಜ.25 ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ILYF) ವತಿಯಿಂದ ಐಎಲ್‌ವೈಎಫ್ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಗ್ರೆವ್ 2026 ಅನ್ನು ಜನವರಿ 29ರಿಂದ ಫೆಬ್ರವರಿ 1, 2026ರವರೆಗೆ ವೈಟ್ ವೆಟಲ್ಸ್, ಪ್ಯಾಲೇಸ್ ಗೌಂಡ್ಸ್, ಬೆಂಗಳೂರುನಲ್ಲಿ ಆಯೋಜಿಸಲಾಗುತ್ತಿದೆ. ಹಿಂದಿನ ಆವೃತ್ತಿಗಳ ಭಾರೀ ಯಶಸ್ಸಿನ ಹಿನ್ನೆಲೆ, ಈ ಬಾರಿ 75,000ಕ್ಕೂ ಹೆಚ್ಚು ಜನರ ಪಾಲ್ಗೊಳ್ಳುವಿಕೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕಾಂಗ್ರೆವ್ ಸ್ಪಷ್ಟವಾದ ವ್ಯಾಪಾರ ಸಾಧನೆಗಳ ದಾಖಲೆಯನ್ನು ಹೊಂದಿದೆ. ಮೈಸೂರು ಕಾಂಕ್ಷೇವ್ 2025ರಲ್ಲಿ ₹130 ಕೋಟಿ, ಹುಬ್ಬಳ್ಳಿ ಕಾಂಕ್ರೇವ್ 2024ರಲ್ಲಿ ₹64 ಕೋಟಿ, ಹಾಗೂ ಬೆಂಗಳೂರು ಕಾಂಕ್ಷೇವ್ 2023ರಲ್ಲಿ 35 ಕೋಟಿ ಮೌಲ್ಯದ ವ್ಯವಹಾರಗಳು ಯಶಸ್ವಿಯಾಗಿ ಕಲೆಹಾಕಿದೆ. ಈ ಸಾಧನೆಗಳ ಹಿನ್ನಲೆಯಲ್ಲಿ 2026ರ ಕಾಂಕ್ಷೇವ್ ಹೊಸ ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯಲ್ಲಿದೆ.

ನಾಲ್ಕು ದಿನಗಳ ಈ ಮಹತ್ವದ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಕೈಗಾರಿಕಾ ನಾಯಕರು, ನೀತಿ ನಿರ್ಣಾಯಕರು, ಸ್ಮಾರ್ಟ್‌ ಅಪ್‌ಗಳು, ಎಂಎಸ್‌ಎಂಇಗಳು ಹಾಗೂ ಜಾಗತಿಕ ವ್ಯಾಪಾರ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರುವರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿ 260ಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳು, ಗ್ಲೋಬಲ್ ನೆಟ್ವರ್ಕಿಂಗ್ ವಲಯ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ವೇದಿಕೆ, ಹಾಗೂ ಪ್ರಮುಖ ವಕ್ತಾರರೊಂದಿಗೆ ಉನ್ನತ ಮಟ್ಟದ ಸಮ್ಮೇಳನಗಳು ನಡೆಯಲಿವೆ. ಸ್ಮಾರ್ಟ್‌ ಅಪ್, ಎಂಎಸ್‌ಎಂಇ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಉದ್ಘಾಟನೆ ಹಾಗೂ ಆರಂಭಿಕ ಸಮಾರಂಭವು ಜನವರಿ 29, 2026ರಂದು ಸಂಜೆ 4:30ಕ್ಕೆ ನಡೆಯಲಿದ್ದು, ಇದನ್ನು ಪರಮ ಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಸಿದ್ಧಗಂಗಾ ಮಠ, ಅವರು ಗೌರವಪೂರ್ವಕವಾಗಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಎಂ.ಬಿ. ಪಾಟೀಲ್, ಶ್ರೀ ಈಶ್ವರ ಖಂಡ್ರೆ, ಶ್ರೀ ಶರಣಬಸಪ್ಪ ದರ್ಶನಾಪು‌ರ್ ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಲಾದ್ ಜೋಶಿ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ.

ಇದಲ್ಲದೆ ಶ್ರೀ ವಿಜಯ್ ಸಂಕೇಶ್ವರ್ (VRL ಗ್ರೂಪ್), ಶ್ರೀ ಬಿ. ಎಂ. ಜಯಶಂಕ‌ರ್ (ಆದರ್ಶ ಗ್ರೂಪ್), ಡಾ. ಶರಣ್ ಪಾಟೀಲ್ (ಸ್ಪರ್ಶ್ ಆಸ್ಪತ್ರೆಗಳ ಸಮೂಹ), ಶ್ರೀ ಭಾಲಚಂದ್ರ ಸಿಂಗ್ ರಾವ್ ರಾಣೆ (FII-TMA), ಶ್ರೀ ರಬೀಂದ್ರನಾಥ್, CII ಅವರು ಭಾಗವಹಿಸಲಿದ್ದಾರೆ.

2026ರ ಫೆಬ್ರವರಿ 1ರಂದು ಸಂಜೆ 4:30ಕ್ಕೆ ನಡೆಯುವ ಸಮಾರೋಪ ಸಮಾರಂಭವು, ಚಿಕ್ಕಮಗಳೂರಿನ ಬಸವತತ್ತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ಮತ್ತು ಗೌರವಾನ್ವಿತ ಅಧ್ಯಕ್ಷತೆಯಲ್ಲಿ ನೆರವೇರಲಿದೆ. ಡಾ. ಶರಣ್ ಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರು), ಶ್ರೀ ವಿಜಯಾನಂದ ಎಸ್. ಕಶಪ್ಪನವರ, ಅಧ್ಯಕ್ಷರು, (KVLDCL), ಶ್ರೀ ಶಂಕರ್ ಬಿದರಿ ಐಪಿಎಸ್ (ನಿವೃತ್ತ), ಶ್ರೀ ಮುರುಗೇಶ್ ನಿರಾಣಿ, ಶ್ರೀ ನವೀನ್ (ಬಸವೇಶ್ವರ ಹೌಸಿಂಗ್ LLP), ಶ್ರೀಮತಿ ರಾಣಿ ಸತೀಶ್, ಹಾಗೂ ಶ್ರೀ ನವೀನ್ ಕೆ. ಎಸ್., ಎಂಎಲ್‌ಸಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 1, 2026ರಂದು ಸಂಜೆ 6:30ಕ್ಕೆ ಸಾಂಸ್ಕೃತಿಕ ಮನರಂಜನಾ ಸಂಜೆಯು ನಡೆಯಲಿದ್ದು, ಖ್ಯಾತ ಗಾಯಕರು ಐಶ್ವರ್ಯ ರಂಗರಾಜನ್, ಸಾಧಿನಿ ಕೊಪ್ಪಾ, ನಿಹಾಲ್ ಹಾಗೂ ಅಶ್ವಿನ್ ಶರ್ಮಾ ಅವರು ತಮ್ಮ ಗಾಯನ ಪ್ರದರ್ಶನ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ  ಸಂತೋಷ್ ಕೆಂಚಂಬಾ, ಅಧ್ಯಕ್ಷರು, ILYF ಟ್ರಸ್ಟ್, ಈ ಗ್ಲೋಬಲ್ ಬಿಸಿನೆಸ್ ಕಾಂಕ್ರೇವ್ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗ. ನೀಡುವುದು ಹಾಗೂ ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರ ನಿರ್ಮಾಣದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಪ್ರಮಾಣ, ವಿಶ್ವಾಸಾರ್ಹತೆ ಹಾಗೂ ಸಾಬೀತಾದ ಆರ್ಥಿಕ ಪರಿಣಾಮದೊಂದಿಗೆ, ಐಎಲ್‌ವೈಎಫ್ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಪ್ಲೇವ್ 2026 ಕರ್ನಾಟಕದ ಅತ್ಯಂತ ಪ್ರಭಾವಶಾಲಿ ವ್ಯಾಪಾರ ವೇದಿಕೆಗಳಲ್ಲೊಂದು ಎಂಬುದಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸವನ್ನು ಆಯೋಜಕರ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ  Sunil Hanji president ilyf belgaum chapter Gowdesh patil secretary
Ravindra bellad treasure