ಬೆಳಗಾವಿ : ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಸರಕಾರಕ್ಕೆ ಬಿಸಿ ತುಪ್ಪವಾಗಿದ್ದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಸಮಾವೇಶವು ಯಶಸ್ವಿಯಾಗುವುದು ಕೊಂಚ ಅನುಮಾನ ಮೂಡಿಸಿದೆ. ಹೌದು ಪಂಚಾಮಸಾಲಿ ಹೋರಾಟದ ರೂಪುರೇಷೆಗಳನ್ನು ನಡೆಸಿದ್ದ ಜಯಮೃತುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಮುಖಂಡರು ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದ್ದರು. ಜಿಲ್ಲಾಡಳಿತವು ಹೋರಾಟಕ್ಕೆ ತಡವಾಗಿ ಪರವಾಣಿಗೆ ನೀಡಿದ್ದರಿಂದ ಟ್ರ್ಯಾಕ್ಟರ್ ರ್ಯಾಲಿ ನಡೆಯುವುದು ಬಹುತೇಕ ಅನುಮಾನವಾಗಿದೆ. ಜಯಮೃತುಂಜಯ ಸ್ವಾಮೀಜಿ ಅವರು ಟ್ಯ್ರಾಕ್ಟರ್ ರ್ಯಾಲಿ ನಡೆಯದಿದ್ದರೂ, ಕಾಲ್ನಡಿಗೆಯಲ್ಲಿಯೇ ಸುವರ್ಣವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನರಾದ ಹಿನ್ನಲೆಯಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಪ್ರಮುಖ ನಾಯಕರು ಅಂತಮ ದರ್ಶನಕ್ಕೆ ಬೆಂಗಳೂರಿಗೆ ತೆರಳುವುದು ಖಚಿತವಾಗಿದೆ. ಇದರಿಂದ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿಯ ಚರ್ಚೆಯನ್ನು ಇಂದು ಅಧಿವೇಶನದಲ್ಲಿ ನಡೆಸಲಿದ್ದಾರೆ. ಇದರಿಂದ ಹೋರಾಟದ ಉದ್ದೇಶ ಸಾಕಾರಗೊಳುವುದೇ ಎಂದು ಕಾಯ್ದು ನೋಡಬೇಕಿದೆ.