This is the title of the web page
This is the title of the web page

ಅಧಿವೇಶನ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆ

ಅಧಿವೇಶನ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆ

 

ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಇನ್ನಿಲ್ಲದ ಬಿಗಿ ಭದ್ರತೆ‌ ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಅಧಿವೇಶನ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆಗಳು ಸುವರ್ಣ ಸೌಧದ ಹೊರಗಡೆ ಗಮನ ಸೆಳೆದಿವೆ.

ಮೊದಲ‌‌‌ ದಿನವಾದ ಇಂದು ಸೋಮವಾರ ಸುಮಾರು 11 ಪ್ರತಿಭಟನೆಗಳು ಗರಿಹೆದರಿದ್ದು, ಸುವರ್ಣ ಸೌಧದ ಹತ್ತಿರ ‘ಸುವರ್ಣ ಗಾರ್ಡನ’ನಲ್ಲಿ ಹಾಗೂ ಕೊಂಡಸಕೊಪ್ಪ ಬೆಟ್ಟದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ‌
ಕರ್ನಾಟಕ ರೈತ ಸಂಘದ‌ ‘ಹಸಿರು ಬ್ರಿಗೇಡ್’, ಅಖಿಲ ಕರ್ನಾಟಕ ರೈತ ಸಂಘ‌ಟನೆ, ಜೈನ ಸಮಾಜಕ್ಕೆ ನಿಗಮ ಮಂಡಳಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ, ರಾಜ್ಯ ಸಾರಿಗೆ ನಿಗಮದ ಕಾರ್ಮಿಕ ಒಕ್ಕೂಟ ಸೇರಿ ಒಟ್ಟು ಹತ್ತಕ್ಕೂ ಹೆಚ್ಚು ಪ್ರಮುಖ ಸಂಘಟನೆಗಳಿಂದ ವಿವಿಧ ಬೇಡಿಕೆಗಳಿಗೆ ಪ್ರತಿಭಟನೆ ಇಂದು ನಡೆಯಿತು.

ಚಳಿಗಾಲ ಅಧಿವೇಶನಕ್ಕೆ ಇನ್ನಿಲ್ಲದ ಬಿಗಿ ಭದ್ರತೆ‌ ಒದಗಿಸಲಾಗಿದ್ದು, ಬೆಳಗಾವಿ ನಗರ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ 7 ಎಸ್ಪಿಗಳು, 12 ಅಡಿಷನಲ್ ಎಸ್ ಪಿಗಳು,‌ 43 ಡಿಎಸ್ಪಿ , 123 ಸಿಪಿಐ/ಪಿಐ ಸೇರಿದಂತೆ ಒಟ್ಟು 4156 ಪೋಲಿಸ್ ಸಿಬ್ಬಂದಿ‌ಗಳ ನಿಯೋಜನೆ ಮಾಡಲಾಗಿದೆ‌.
35 KSRP, 10 ಡಿಎಆರ್ ,‌10 ಡ್ರೋನ್‌ ಕ್ಯಾಮರಾ ಜೊತೆ 300 ಬಾಡಿ ಕ್ಯಾಮರಾಗಳ ಬಳಕೆ ಮಾಡಲಾಗಿದೆ. ಸುವರ್ಣಸೌಧ ಮುಖ್ಯ ದ್ವಾರಸಲ್ಲಿ ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ.
ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ವ್ಯವಸ್ಥೆ ಮೇಲೆ ಕಣ್ಗಾವಲು ಇರಿಸಿದ್ದಾರೆ.