This is the title of the web page
This is the title of the web page

ವಿದ್ಯುತ ತಗುಲಿ ಹದಿಮೂರು ದನಗಳ ಸಾವು

ವಿದ್ಯುತ ತಗುಲಿ ಹದಿಮೂರು ದನಗಳ ಸಾವು

ಯಮಕನಮರಡಿ : ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಹಳೆ ವಂಟಮೂರಿ ಗ್ರಾಮದಲ್ಲಿ ವಿದ್ಯುತ ತಗುಲಿ ೧೩ ದನಗಳು ಮೃತಪಟ್ಟ ಘಟನೆಯು ಮಂಗಳವಾರ ಸಾಯಂಕಾಲ ೫.೩೦ ಗಂಟೆಗೆ ಜರುಗಿದೆ. ಗ್ರಾಮದ ಮೂರು ಜನರು ಸೇರಿಕೊಂಡು ದನಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ವೇಳೆ ಮಳೆ ಬಂದಾಗ ದನಗಳನ್ನು ಕರೆದುಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಿದ್ದಾಗ ಕರಿಕಟ್ಟಿ ಹಳೆವಂಟಮೂರಿ ಕೂಡುವ ರಸ್ತೆ ಮಧ್ಯದಲ್ಲಿರುವ ವಿದ್ಯುತ ಕಂಬದಿAದ ವಿದ್ಯುತ ನೆಲದಲ್ಲಿ ಹರಿದಾಗ ವಿಧ್ಯುತ ತಗುಲಿ ೧೩ ದನಗಳು ಸ್ಥಳದಲ್ಲಿ ಮೃತಪಟ್ಟಿವೆ. ಮುತ್ತಪ್ಪಾ ಹುಚ್ಚಯಲ್ಲಪ್ಪಾ ಬಸರಗಿ ಇವರ ೪ ಆಕಳುಗಳು ೨ ಹೋರಿಗಳು, ಲಕ್ಷö್ಮಣ ಅಪ್ಪಯ್ಯಾ ಕಿಲಾರಗಿ ಇವರ ೧ ಆಕಳು ೧ ಎಮ್ಮೆ ಮತ್ತು ಯಲ್ಲವ್ವಾ ನಿಂಗಪ್ಪ ಮಸ್ತಿ ಇವರ ೫ ಆಕಳುಗಳು ಸ್ಥಳದಲ್ಲಿ ಮೃತಪಟ್ಟಿವೆ ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಬುಕನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಿಎಸ್‌ಐ ಎಸ್.ಕೆ. ಮನ್ನೀಕೇರಿ, ಪಶುವೈಧ್ಯಾಧಿಕಾರಿ ಸಿದ್ದಾರ್ಥ ಮೊಕಾಶಿ, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ಮಾರುತಿ ಗುಟಗುದ್ದಿ ಬೇಟಿ ನೀಡಿದರು.