ಹುಕ್ಕೇರಿ: ಹುಕ್ಕೇರಿ ತಾಲೂಕಿನ ಹಿಡಕಲ್ ರಾಜಾ ಲಖಮಗೌಡ ಜಲಾಶಯಕ್ಕೆ ಅಪಾರ ಪ್ರಮಾ಼ಣದ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಬುಧವಾರ ಹತ್ತು ಕ್ರೆಷ್ಟ ಗೇಟಗಳ ಮೂಲಕ ೧೦ ಸಾವಿರ ಕ್ಯೂಸೇಕ್ ನೀರನ್ನು ಬಿಡಲಾಗಿದೆ.
ಮಹಾರಾಷ್ಟçದ ಗಡಿಭಾಗದ ಪಶ್ಚಿಮಘಟ್ಟದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ರಾಜಾಲಖಮಗೌಡ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ೫೧ ಟಿ.ಎಮ್ ಸಿ ಸಾಮರ್ಥ್ಯವಿರುವ ಜಲಾಶಯದಲ್ಲಿ ೪೪ ಟಿಎಮ್ ಸಿ ಭರ್ತಿಯಾಗಿದೆ. ಇಂದು ೧೦ ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಗಿದೆ.
೨೧೭೫ ಗರಿಷ್ಟ ಮಟ್ಟ ಹೊಂದಿರುವ ಜಲಾಶಯದಲ್ಲಿ ೨೧೬೫ ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು ಹೆಚ್ಚಳವಾದಲ್ಲಿ ಯಾವ ಕ್ಷಣದಲ್ಲಿ ಮತ್ತೆ ನೀರು ಬಿಡಬಹುದು ಕಾರಣ ಘಟಪ್ರಬ ನದಿಯ ದಡದಲ್ಲಿ ಜನರು ಮುಂಜಾಗೃತೆ ವಹಿಸಿ ಸುರಕ್ಷಿತÀ ಸ್ಥಳಕ್ಕೆ ತೆರಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.