ಬೆಳಗಾವಿ : ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಇಬ್ಬರನ್ನು ಬಂಧಿಸಿ ಆತನಿಂದ ₹ 1076900 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಾರಷ್ಟ್ರದ ರಫೀಕ್ ಮಹಮ್ಮದ್ ಶೇಖ ಹಾಗೂ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದ ಪ್ರಜ್ವಲ್ ಖಾನಜೆ ಬಂಧಿತರು.
ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 5 ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡಿದ್ದು, ಬಂಧಿತರಿಂದ ಒಟ್ಟು ₹ 1076900 ಮೌಲ್ಯದ 48 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ ₹ 3800ಮೌಲ್ಯದ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾದ ಡಿಸಿಪಿ ಸ್ನೇಹ ಪಿ ವಿ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪೊಲೀಸ್ ಠಾಣೆಯ ಇನ್ಸಪೆಕ್ಟರ ಡಿ. ಕೆ ಪಾಟೀಲ ಮತ್ತು ಪಿಎಸ್ಐಗಳಾದ ಕಿರಣ ಹೊನಕಟ್ಟಿ , ಆರ್.ಪಿ.ಕದಮ ನೇತೃತ್ವದಲ್ಲಿ ಸಿಬ್ಬಂದಿ ಭರಮಣ್ಣ ಕರೆಗಾರ್, ಜಗದೀಶ್ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ, ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ಕಾರ್ಯದಲ್ಲಿ ತೋಡಗಿದ್ದರು. ಈ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
————