This is the title of the web page
This is the title of the web page

ಬಿಜೆಪಿ 200 ಸ್ಥಾನಗಳ ಗಡಿ ದಾಟುವುದಿಲ್ಲ: ಪ್ರಶಾಂತ್ ಭೂಷಣ್ ಭವಿಷ್ಯ

ಬಿಜೆಪಿ 200 ಸ್ಥಾನಗಳ ಗಡಿ ದಾಟುವುದಿಲ್ಲ: ಪ್ರಶಾಂತ್ ಭೂಷಣ್ ಭವಿಷ್ಯ

 

ಕೋಲ್ಕತ್ತಾ :  ಕೋಮುಪ್ರಚಾರ ಕೂಡ ಬಿಜೆಪಿಯ ಜನಪ್ರಿಯತೆ ಕುಸಿತದ ಹಿಂದಿನ ಹಲವು ಕಾರಣಗಳಲ್ಲಿ ಒಂದು. ಜನರು ಇಂಥ ವಿಷಯಗಳನ್ನು ಇಷ್ಟಪಡುವುದಿಲ್ಲ.ದೇಶದ್ಯಾಂತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಕೋಲ್ಕೋತ್ತಾದಲ್ಲಿ ನಡೆದ ಸೆಮಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ʻದೇಶದಾದ್ಯಂತ ಪ್ರತಿಕೂಲ ವಾತಾವರಣʼ ಇರುವುದರಿಂದ ಮತ್ತು ಹೆಚ್ಚಿನವರು ಪಕ್ಷವನ್ನು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಪರಿಗಣಿಸಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ 200 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಎನ್‌ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ, ಪಕ್ಷ ಸಂಸತ್ತಿನಲ್ಲಿ ಇಂಡಿಯ ಒಕ್ಕೂಟವನ್ನು ಮುನ್ನಡೆಸಬೇಕೆ ಹೊರತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಲ್ಲ ಎಂದು ಭೂಷಣ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ʻಮಾಂಸ, ಮಂಗಳಸೂತ್ರ ಮತ್ತು ಎಮ್ಮೆಗಳು’ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ʻಚುನಾವಣೆ ತನ್ನ ಹಿಡಿತದಿಂದ ಜಾರುತ್ತಿದೆ ಎಂದು ಪ್ರಧಾನಿ ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಹತಾಶೆಯಿಂದ ಬೆಂಕಿ ಹಚ್ಚುವಂತ ಭಾಷಣ ಮಾಡುತ್ತಿದ್ದಾರೆʼ ಎಂದು ಆರೋಪಿಸಿದರು.

ʻಹಲವು ಕಾರಣಗಳಿಗಾಗಿ ಬಿಜೆಪಿ ವಿರುದ್ಧ ಪ್ರತಿಕೂಲ ವಾತಾವರಣ ಇದೆ ಎಂದು ನಾನು ಭಾವಿಸುತ್ತೇನೆ. ಅವರು (ಬಿಜೆಪಿ) ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟುಮಾಡುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳಿಸಲು ಮತ್ತು ಚುನಾವಣೆ ವೆಚ್ಚಕ್ಕೆ ಹಣ ಸಿಗದಂತೆ ನಿರ್ಬಂಧ ಹೇರುತ್ತಿದ್ದಾರೆ. ಹೀಗಾಗಿ ಜನರಿಗೆ ಬಿಜೆಪಿ ವಿರುದ್ಧ ಸಾಕಷ್ಟು ಕೋಪವಿದೆ,ʼ ಎಂದು ವಿವರಿಸಿದ್ದಾರೆ.