ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು ಭಾನುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ವ್ಯಾಪಕ ಪ್ರತಿಭಟನೆ: ಪ್ರಜ್ವಲ್ ರೇವಣ್ಣ ಅವರು ಸಾವಿರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮಹಿಳಾ ಸದಸ್ಯರು ಮತ್ತು ಮಹಿಳಾ ಪರ ಸಂಘಟನೆ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಸಂಸದನ ಪೋಸ್ಟರ್‌ಗಳನ್ನು ಸುಟ್ಟುಹಾಕಿದರು. ಜೆಡಿ (ಎಸ್) ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ 33 ವರ್ಷದ ವಿರುದ್ಧ ಘೋಷಣೆಗಳನ್ನು ಎತ್ತುವ ಮೂಲಕ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿರುವ ಸಾಕಷ್ಟು ವಿಡಿಯೊಗಳ ಸಾಕ್ಷಿಗಳಿವೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಆರಂಭಿಸಿರುವುದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸ್ವಾಗತಿಸಿದ್ದಾರೆ.
ಹಾಸನ ಸಂಸದರಿಗೆ ಸಂಬಂಧಪಟ್ಟವುಗಳು ಎಂದು ಹೇಳಲಾಗುತ್ತಿರುವ ವಿಡಿಯೊಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ನ್ನು ಕಂಪ್ಯೂಟರ್ ಲ್ಲಿ ಹಾಕಿದ್ದು ನಿಜ. ಆದರೆ ನನಗೆ ನೋಡಲು ಬಹಳ ಕಷ್ಟವಾಯಿತು. ಅದರ ಬಗ್ಗೆ ಮಾಹಿತಿ ತಿಳಿದುಕೊಂಡಾಗ ಬಹಳಷ್ಟು ಹೆಣ್ಣುಮಕ್ಕಳ ವಿಡಿಯೊಗಳು ಅದರಲ್ಲಿವೆ. ಸಾಕಷ್ಟು ಮಹಿಳೆಯರು ನೊಂದಿದ್ದಾರೆ. ಸಾಕಷ್ಟು ಮಹಿಳೆಯರ ಲೈಗಿಂಕ ಚಿತ್ರಣ ಮಾಲಾಗಿದೆ. ಪೆನ್ ಡ್ರೈವ್ ನಲ್ಲಿ ದೌರ್ಜನ್ಯದ ವಿಡಿಯೋಗಳಿವೆ. ಅಧಿಕಾರ ಹಾಗೂ ಸ್ಥಾನ ದೂರುಪಯೋಗ ಮಾಡಿಕೊಂಡು ಮಹಿಳೆಯರ ಅಸಾಹಯಕ ಬಳಸಿಕೊಂಡು ಲೈಗಿಂಕ ಚಿತ್ರಿಕರಣ ಮಾಡಲಾಗಿದೆ ಎಂದು ಆರೋಪಿಸಿದರು
ಲೈಂಗಿಕ ಚಿತ್ರೀಕರಣ ಮಾಡಿರುವುದು ನಿಜ, ಕಿರುಕುಳ ನೀಡಿದ ವ್ಯಕ್ತಿಯೇ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಚಿತ್ರೀಕರಣ ಮಾಡಿದ್ದಾರೆ. ಈ ರೀತಿಯ ಕೃತ್ಯ ಮೊದಲ ಬಾರಿಗೆ ಆಗಿದ್ದು ಎಂದು ಕಾಣುತ್ತದೆ, ಸಾವಿರಾರು ಮಹಿಳೆಯರು ಒಬ್ಬ ವ್ಯಕ್ತಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಸಾವಿರಾರು ಹೆಣ್ಣುಮಕ್ಕಳ ಭವಿಷ್ಯವಿದೆ ಎಂದು ಕಳಕಳಿಯಿಂದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದೆ. ಕೂಡಲೇ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿರುವುದು ತೃಪ್ತಿ ತಂದಿದೆ ಎಂದರು.
ದೂರು ದಾಖಲು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ದೂರು ದಾಖಲಾಗಿದೆ. ನೊಂದ ಸಂತ್ರಸ್ತೆ ಕೊನೆಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ನಿನ್ನೆ ಓರ್ವ ಸಂತ್ರಸ್ತೆ ಪೋನ್ ಕಾಲ್ ಮೂಲಕ ದೂರು ನೀಡಿದ್ದರೆ, ಇಂದು ಮಹಿಳಾ ಆಯೋಗಕ್ಕೆ ವಾಟ್ಸಾಪ್ ಮೂಲಕ ದೂರು ನೀಡಿದ್ದಾರೆ. ಇನ್ನು ಮತ್ತೊಂದೆಡೆ ಇದೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ಗೆ ಸಂಬಂಧಿಸಿದಂತೆ ಜೆಡಿಎಸ್ ಚುನಾವಣಾ ಏಜೆಂಟ್ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.