ಬೆಳಗಾವಿ: ಕಾಂಗ್ರೆಸ್ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಹಾಳು ಮಾಡಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ದೇಶದ ರಾಜ-ಮಹರಾಜರಿಗೆ ಅಪಮಾನ ಮಾಡುತ್ತಿದೆ. ಔರಂಗಜೇಬನನ್ನು ಗುಣಗಾನ ಮಾಡುವ ಪಕ್ಷದೊಂದಿಗೆ ಕಾಂಗ್ರೆಸ್ ಘಟಬಂದನ್ ಮಾಡಿಕೊಂಡಿದೆ ಎಂದು ಟೀಕಿಸಿದರು.
ಮೋದಿ ಬರುವ ದಿನಗಳಲ್ಲೂ ಗ್ಯಾರಂಟಿ ನೀಡುತ್ತಾರೆ. ನಿಮ್ಮ ಸೇವಕ ಮಹಿಳೆಯರು, ಯುವಕರನ್ನು ಸಶಕ್ತ ಮಾಡುವ ಮೂಲಕ ದೇಶ ಅಭಿವೃದ್ಧಿ ಮಾಡುತ್ತಿದ್ದಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ನಿಮ್ಮ ಆಸ್ತಿ, ಖಜಾನೆ, ಮಹಿಳೆಯರ ಬಳಿ ಎಷ್ಟು ಹಣ ಇದೆ, ಬಂಗಾರ ಎಷ್ಟಿದೆ, ಮಂಗಳ ಸೂತ್ರ ಎಲ್ಲಿದೆ ಅಂತ ತಪಾಸಣೆ ಮಾಡುತ್ತದೆ. ಕಾಂಗ್ರೆಸ್ ನಿಮ್ಮ ಆಸ್ತಿಯನ್ನು ಹಂಚಲು ಹೊರಟಿದೆ. ನಿಮ್ಮ ಮಂಗಳ ಸೂತ್ರದ ಮೇಲೆ ಕೈ ಹಾಕಲು ಬಿಡುತ್ತೀರಾ? ನಿಮ್ಮ ಹಣ, ಬಂಗಾರ ಮತ್ತು ಆಸ್ತಿಯನ್ನು ಲೂಟಿ ಮಾಡಲು ಬಿಡುತ್ತೀರಾ ಎಂದು ಪ್ರಧಾನಿ ಮೋದಿ ಜನತೆಯನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಇಂದು ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನ ಮಂತ್ರಿಗಳು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅಪಮಾನ ಮಾಡಲಾಯಿತು. ಚಿಕ್ಕೋಡಿಯಲ್ಲಿ ಜೈನ ಮುನಿಯ ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾಯಿತು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಂಡಿತು. ಈ ಸ್ಫೋಟವನ್ನು ಕಾಂಗ್ರೆಸ್ ಸಿಲೆಂಡರ್ ಬ್ಲಾಸ್ಟ್ ಎಂದಿತು. ಕಾಂಗ್ರೆಸ್ ಮತಕ್ಕಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬರಬಾದ್ ಆಗಲಿದೆ. ದೇಶವಿರೋಧಿ ಪಿಎಫ್ಐ ಸಂಘಟನೆ ಕಾಂಗ್ರೆಸ್ಗೆ ಬೆಂಬಲ ನೀಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸುಳ್ಳು ಹೇಳುತ್ತಾ, ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಮಹತ್ವದ ವಿಚಾರಗಳ ಬಗ್ಗೆ ಸುಳ್ಳು ಹೇಳುತ್ತಾ, ದೇಶದ ಲೋಕತಂತ್ರವನ್ನು ಹಾಳು ಮಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಮಾನಸಿಕವಾಗಿ ಆಂಗ್ಲರ ಗುಲಾಮಿತನ ಭಾವದಿಂದ ಜೀವಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ಮಾಡಿದರು.
ಕನ್ನಡಲದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ. ಸವದತ್ತಿ ಯಲ್ಲಮ್ಮ ದೇವಿ ಸ್ಮರಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಬೆಳಗಾವಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನಾನು ರಾಜ್ಯದ ಯಾವುದೇ ಮೂಲೆಗೆ ಹೋದರೂ ಫಿರ್ ಏಕ್ ಬಾರ್ ಮೋದಿ ಘೋಷಣೆ ಕೇಳುತ್ತೇನೆ.