This is the title of the web page
This is the title of the web page

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನರೇಂದ್ರ ಮೋದಿ ಶ್ರೀಮಂತರಿಗೆ ನೀಡಿರುವ ಹಣವನ್ನು ನಾವು ಬಡವರಿಗೆ, ರೈತರಿಗೆ, ಯುವಕರಿಗೆ ನೀಡುತ್ತೇವೆ : ರಾಹುಲ್ ಗಾಂಧಿ

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನರೇಂದ್ರ ಮೋದಿ ಶ್ರೀಮಂತರಿಗೆ ನೀಡಿರುವ ಹಣವನ್ನು ನಾವು ಬಡವರಿಗೆ, ರೈತರಿಗೆ, ಯುವಕರಿಗೆ ನೀಡುತ್ತೇವೆ : ರಾಹುಲ್ ಗಾಂಧಿ

 

ವಿಜಯಪುರ : ಲೋಕಸಭೆ ಚುನಾವಣೆ. ನರೇಂದ್ರ ಮೋದಿ ಶ್ರೀಮಂತರಿಗೆ ನೀಡಿರುವ ಹಣವನ್ನು ನಾವು ಬಡವರಿಗೆ, ರೈತರಿಗೆ, ಯುವಕರಿಗೆ ನೀಡುತ್ತೇವೆ ಬಳಿಕ ದೇಶದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರೈತರ ಸಾಲಮನ್ನಾ ಮಾಡುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ತಪ್ಪು ಜಿ.ಎಸ್.ಟಿ. ಹಾಗೂ ಸೇನೆಯನ್ನು ದುರ್ಬಲಗೊಳಿಸಿರುವ ಅಗ್ನಿವೀರ ಯೋಜನೆಯನ್ನು ರದ್ದು ಮಾಡುವುದಾಗಿ ರಾಹುಲ್ ಗಾಂಧಿ ಘೋಷಿಸಿದರು.

ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಿಂದಲೇ ಜನರಿಗೆ ಎಲ್ಲ ಹಕ್ಕುಗಳು ಸಿಕ್ಕಿವೆ. ಇದಕ್ಕೂ ಮುನ್ನ ರಾಜ- ಮಹಾರಾಜರ ಆಡಳಿತವಿತ್ತು. ಇಂದು ಬಡವರ ಬಳಿ ದಲಿತರ ಬಳಿ ಆದಿವಾಸಿಗಳ ಬಳಿ ಆಧಿಕಾರ ಧ್ವನಿ ಇದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ ಎಂದರು.

ಒಂದು ಕಡೆ ನರೇಂದ್ರ ಮೋದಿ ಸಂವಿಧಾನವನ್ನು ಕೊನೆಗಾಣಿಸಲು ಹೊರಟಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಾಯಿಸು, ನಾಶ ಮಾಡುವ ಮಾತನಾಡುತ್ತಿದ್ದಾರೆ. ಮೋದಿ ಅವರು ಮತ್ತೆ ಆಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ. ಒಂದು ಕಡೆ ಬಿಜೆಪಿ-ಮೋದಿ ಮತ್ತೊಂದೆಡೆ ನಮ್ಮ ಕಾಂಗ್ರೆಸ್ ಪಕ್ಷ ಸಹಿತ ಇಂಡಿಯಾ ಮೈತ್ರಿ ಕೂಟ ಇದೆ.

ನರೇಂದ್ರ ಮೋದಿ ಕಳೆದ 10 ವರ್ಷದಲ್ಲಿ 20-25 ಜನರನ್ನು ಕೋಟ್ಯಾಧಿಪತಿ ಮಾಡಿದ್ದಾರೆ. ಭಾರತದ ದೇಶದ ಸಂಪತ್ತು ಅದಾನಿ ಅವರಂಥ ಕೆಲವೇ ಕೆಲವರ ಬಳಿ ಇದೆ. ದೇಶದ ಸಾರ್ವಜನಿಕ ಆಸ್ತಿಯನ್ನು ವಿಮಾನ ನಿಲ್ದಾಣ, ಸೌರಶಕ್ತಿ ಯೋಜನೆಗಳ ಮೂಲಕ ನೀಡಿದ್ದಾರೆ. ಮೋದಿ ಅವರ ಆಡಳಿತದಲ್ಲಿ ಬಡವರಿಗೆ ಏನೂ ಕೂಡಾ ಸಿಕ್ಕಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೆವೆ.

ಕರ್ನಾಕಟದ ಪ್ರತಿ ಕುಟುಂಬದ ಮಹಿಳೆಯರಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಸಿಗುತ್ತಿದೆ. ಇದರಿಂದ ಕರ್ನಾಟಕದ 1 ಕೋಟಿ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ಸಿಗುತ್ತಿದೆ. ಮಹಿಳೆಯರಿಗೆ ಹಣ ಕೊಡುವುದರಿಂದ ಅವರು ದೇಶದ ಕುಟುಂಬದ ರಕ್ಷಣೆ ಮಾಡುತ್ತಾರೆ.
ಮಹಿಳೆಯರು ಹೊರಗೆ 8 ಗಂಟೆ ಕೆಲಸ ಮಾಡಿ ಬಂದ ಮೆಲೆಯೂ ಮನೆಯಲ್ಲಿ ಮಕ್ಕಳ ಪಾಲನೆ ಹಾಗೂ ಇತರೆ ಕೆಲಸ ಅಂತೆಲ್ಲ ಮತ್ತೆ 8 ಗಂಟೆ ಕೆಲಸ ಮಾಡುತ್ತಾಳೆ. ಇದಕ್ಕಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದೇವೆ ಎಂದು ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ಸಮರ್ಥಿಸಿದರು.

ಮೋದಿ 10 ವರ್ಷದಲ್ಲಿ ಕೇವಲ ಬಡವರ ಹಣ ಕಿತ್ತುಕೊಂಡಿದ್ದಾರೆ. ಕೆಲವನ್ನು ಅರಬ್ ಪತಿ ಮಾಡಿದ್ದಾರೆ ಅವರ ಬಳಿ ಬಳಿ ಇದ್ದ ಹಣ ಶೇ. 75 ರಷ್ಟು ಬಡವರಿ ಬಳಿ ಇದ್ದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ಟೀಕಿಸಿದರು.
ಬಡವರು, ಅಲ್ಪಸಂಖ್ಯಾತರು, ಹಿಂದುಗಳಿದ, ದಲಿತರು, ಆದಿವಾಸಿಗಳಿಗೆ ಜಾಗವಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ ಬಡವರಣ ಹಣವನ್ನು ಮೊದಿ ಅವರು ಶ್ರೀಮಂತರಿಗೆ ನೀಡಿದ್ದಾರೆ. ಅವರು ಶ್ರೀಮಂತರಿಗೆ ನೀಡಿರುವ ಅಷ್ಟೂ ಹಣವನ್ನು ನಾವು ಬಡವರಿಗೆ ನೀಡುತ್ತೇವೆ. ಹೀಗಾಗಿ ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದರು.
ಹೃದಯದ ಅಂತರಾಳದಿಂದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಕಾರ್ಯಕರ್ತರು ಹುಲಿ, ಸಿಂಹ ಇದ್ದಂತೆ ಇದ್ದೀರಿ. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ಎಂದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ,, ಸುನಿಲಗೌಡ ಪಾಟೀಲ ಇತರರು ವೇದಿಕೆ ಮೇಲಿದ್ದರು‌.