This is the title of the web page
This is the title of the web page

ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಕೇಂದ್ರ ಸರ್ಕಾರ ಸೀಜ್ ಮಾಡಿದೆ : ಪೇಪರ್‌ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲದಂತಾಗಿದೆ ; ರಾಹುಲ್‌ ಗಾಂಧಿ ಅಸಹಾಯಕತೆ ತೋಡಿಕೊಂಡರು

ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಕೇಂದ್ರ ಸರ್ಕಾರ ಸೀಜ್ ಮಾಡಿದೆ : ಪೇಪರ್‌ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲದಂತಾಗಿದೆ ; ರಾಹುಲ್‌ ಗಾಂಧಿ ಅಸಹಾಯಕತೆ ತೋಡಿಕೊಂಡರು

ನವದೆಹಲಿ; ಕೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರಣದಿಂದ ನಮ್ಮ ಪಕ್ಷದಿಂದ ಹಣ ತೆಗೆಯಲು ಆಗುತ್ತಿಲ್ಲ. ಇದರಿಂದಾಗಿ ನಾವು ಚುನಾವಣೆಗೆ ಜಾಹೀರಾತು ನೀಡೋದಕ್ಕೂ ಆಗುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಕೇಂದ್ರ ಸರ್ಕಾರ ಫ್ರೀಜ್‌ ಮಾಡಿರುವುದರಿಂದ ಪೇಪರ್‌ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲದಂತಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಹಾಯಕತೆ ತೋಡಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖ್ಯಾತೆಗಳನ್ನು ಫ್ರೀಸ್‌ ಮಾಡಿದೆ.. ಇದರಿಂದಾಗಿ ನಮ್ಮ ಬ್ಯಾಂಕ್ ಖಾತೆಯಿಂದ ನಮಗೆ ಹಣ ತೆಗಿಯೋಕೆ ಆಗ್ತಿಲ್ಲ. ಎಲೆಕ್ಷನ್‌ ಬಾಂಡ್‌ಗಳ ಮೂಲಕ ಖಜಾನೆ ತುಂಬಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಅಕೌಂಟ್‌ನಲ್ಲಿ ಹಣ ಮಾತ್ರ ಬಳಕೆ ಮಾಡೋದಕ್ಕೆ ಬಿಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಚುನಾವಣೆಗೆ ಜಾಹೀರಾತು ನೀಡೋದಕ್ಕೂ ಆಗುತ್ತಿಲ್ಲ. ಅಕೌಂಟ್‌ಗಳು ಫ್ರೀಜ್‌ ಆಗಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಒಂದು ಪೇಪರ್‌ ನಲ್ಲಿ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲ.. ನಮಗೆ ಒಂದು ರೈಲ್ವೆ ಟಿಕೆಟ್‌ ಬುಕ್‌ ಮಾಡೋದಕ್ಕೂ ಆಗುತ್ತಿಲ್ಲ ಎಂದು ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬಂತಿತ್ತು.. ಆದ್ರೆ ಬಿಜೆಪಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

ನಮ್ಮ ಪಕ್ಷದ ಬ್ಯಾಂಕ್‌ ಖಾತೆಗಳನ್ನೆಲ್ಲಾ ಸೀಜ್‌ ಮಾಡಿದ್ದಾರೆ.. ಹೀಗಾಗಿ ನಾವು ಪ್ರಚಾರ ಮಾಡುವುದು ಹೇಗೆ..? ಚುನಾವಣೆ ಎದುರಿಸುವುದು ಹೇಗೆ ಎಂದೂ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.. ಇದು ನಮ್ಮ ಜನರ ಮೇಲೆ ಮಾಡ್ತಾ ಇರುವಂತಹ ಆಕ್ರಮಣ, ಎಲ್ಲರೂ ನಾಟಕ ನೋಡಿದಂತೆ ನೋಡ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಭಾರತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ.. ಚುನಾವಣೆ ನ್ಯಾಯ ಸಮ್ಮತವಾಗಿ ಎದುರಿಸಬೇಕು.. ಎಲ್ಲಾ ಪಕ್ಷಗಳಿಗೂ ಸಮಾನವಾದ ಅವಕಾಶಗಳು ಸಿಗಬೇಕು.. ಆದ್ರೆ ಬಿಜೆಪಿ ಸರ್ಕಾರ ಸಂಪನ್ಮೂಲಗಳು, ಮಾಧ್ಯಮಗಳು, ಸಾಂವಿಧಾನಿಕ ಮತ್ತು ನ್ಯಾಯಾಂಗ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಅಂತ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಇದ್ದಾಗ ಕಳೆದ 70 ವರ್ಷಗಳಲ್ಲಿ ನ್ಯಾಯಯುತವಾಗಿ ಚುನಾವಣೆಗಳು ನಡೆದಿದ್ದವು. ಆದ್ರೆ ಈಗ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಈಗಿನ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ತನ್ನ ಖಾತೆಗೆ ತುಂಬಿಕೊಂಡಿದೆ ಎಂದು ಖರ್ಗೆ ಗುಡುಗಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಕೂಡ ಭಾಗಿಯಾಗಿದ್ದರು.