This is the title of the web page
This is the title of the web page

ಚುನಾವಣಾ ಆಯೋಗ ಇಂದು ಚುನಾವಣಾ ಬಾಂಡ್ ಹೊಸ ದತ್ತಾಂಶ ಬಹಿರಂಗಗೊಳಿಸಿದೆ. ಚುನಾವಣಾ ಆಯೋಗ

ಚುನಾವಣಾ ಆಯೋಗ ಇಂದು ಚುನಾವಣಾ ಬಾಂಡ್ ಹೊಸ ದತ್ತಾಂಶ ಬಹಿರಂಗಗೊಳಿಸಿದೆ. ಚುನಾವಣಾ ಆಯೋಗ

ನವದೆಹಲಿ: ಚುನಾವಣಾ ಆಯೋಗ ಇಂದು ಚುನಾವಣಾ ಬಾಂಡ್ ಗಳ ಹೊಸ ದತ್ತಾಂಶವನ್ನು ಬಹಿರಂಗಗೊಳಿಸಿದೆ. ಸುಪ್ರೀಂಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಮಾಹಿತಿಯನ್ನು ಆಯೋಗ ಈಗ ಬಹಿರಂಗಪಡಿಸಿದೆ.

“ರಾಜಕೀಯ ಪಕ್ಷಗಳಿಂದ ಪಡೆದ ಡೇಟಾವನ್ನು ಸೀಲ್ ಮಾಡಿದ ಕವರ್‌ಗಳನ್ನು ತೆರೆಯದೆ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಲಾಗಿದೆ. ಮಾರ್ಚ್ 15, 2024 ರಂದು ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಭೌತಿಕ ಪ್ರತಿಗಳನ್ನು ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಹಿಂದಿರುಗಿಸಿದೆ.

ಲೋಕಸಭಾ ಚುನಾವಣೆ 2024 ನೀತಿ ಸಂಹಿತೆ ಜಾರಿ: ಇಂದಿನಿಂದ ಏನೆಲ್ಲಾ ಬದಲಾವಣೆಯಾಗಲಿದೆ ಅಂದರೆ…
2019 ರ ಏ.12 ಕ್ಕಿಂತಲೂ ಹಿಂದಿನ ದತ್ತಾಂಶ ಇದಾಗಿದೆ ಎಂದು ತಿಳಿದುಬಂದಿದೆ. 2019 ರ ಏ.12ರ ನಂತರದ ಅವಧಿಯ ಚುನಾವಣಾ ಬಾಂಡ್ ವಿವರಗಳನ್ನು ಕಳೆದ ವಾರ ಆಯೋಗ ಬಿಡುಗಡೆ ಮಾಡಿತ್ತು. ಏಪ್ರಿಲ್ 12, 2019 ರ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಸೀಲ್ಡ್ ಕವರ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿವೆ ಎಂದು ಚುನಾವಣಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.ಭಾರತೀಯ ಚುನಾವಣಾ ಆಯೋಗ ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಿಂದ ಡಿಜಿಟೈಸ್ ಮಾಡಿ ಸ್ವೀಕರಿಸಿದ ಡೇಟಾವನ್ನು ಅಪ್‌ಲೋಡ್ ಮಾಡಿದೆ” ಎಂದು ಆಯೋಗ ಹೇಳಿದೆ.