This is the title of the web page
This is the title of the web page

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಕರಡಿ ಸಂಗಣ್ಣ ಬೆಂಬಲಿಗರಿಂದ ಆಕ್ರೋಶ- ಕೊಪ್ಪಳ ಬಿಜೆಪಿ ಕಚೇರಿ ಕಿಟಕಿ ಗಾಜು ಪುಡಿ ಪುಡಿ

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಕರಡಿ ಸಂಗಣ್ಣ ಬೆಂಬಲಿಗರಿಂದ ಆಕ್ರೋಶ- ಕೊಪ್ಪಳ ಬಿಜೆಪಿ ಕಚೇರಿ ಕಿಟಕಿ ಗಾಜು ಪುಡಿ ಪುಡಿ

 

ಕೊಪ್ಪಳ ಮಾ 14: ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಕೊಪ್ಪಳ  ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ತಮ್ಮ ನಾಯಕರಿಗೆ ಟಿಕೆಟ್ ನೀಡದೇ ಇರುವುದು ಅನ್ಯಾಯ ಎಂದು ಘೋಷಣೆಗಳನ್ನು ಕೂಗಿತ್ತಾ ಕಲ್ಲು ತೂರಾಟ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ಬಿಜೆಪಿ ಕಚೇರಿಯಲ್ಲಿ ಕಲ್ಲು ತೂರಾಟ ನಡೆಸಿ ಪೀಠೋಪಕರಣ ಧ್ವಂಸ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ಹೈಡ್ರಾಮಾ ನಡೆದಿದ್ದು, ಸಂಗಣ್ಣ ಕರಡಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪೀಠೋಪಕರಣವನ್ನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿದ್ದು, ಹಲವು ಕಛೇರಿ ಪೀಠೋಪಕರಣಗಳೆಲ್ಲವೂ ಪುಡಿಪುಡಿಯಾಗಿವೆ ಎನ್ನಲಾಗಿದೆ.

ಇನ್ನು ಟಿಕೆಟ್ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಂಗಣ್ಣ ಕರಡಿ, ನನಗೆ ಯಾಕೆ ಟಿಕೆಟ್ ಮಿಸ್ ಆಗಿದೆ ಗೊತ್ತಿಲ್ಲ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಬೇಕು. ಬಿಜೆಪಿ ನಾಯಕರು ನನ್ನನ್ನ ಸಂಪರ್ಕಿಸಿಲ್ಲ. ಬೇರೆ ಪಕ್ಷದ ಯಾವ ನಾಯಕರೂ ಸಂಪರ್ಕಿಸಿಲ್ಲ ಬೇರೆ ಪಕ್ಷಕ್ಕೆ ಹೋಗುವ ನಿರ್ಧಾರ ನನ್ನ ಬಳಿ ಇಲ್ಲ. ಇಡೀ ಜಗತ್ತು ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ನಾವು ಕೂಡ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದೇವೆ ಎಂದರು.

ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಸಂಜೆ ಬಿಡುಗಡೆ ಮಾಡಿತು. ಆದರೆ ಈ ಪಟ್ಟಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕರಡಿ ಸಂಗಣ್ಣ  ಬದಲಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್  ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಇದು ಕರಡಿ ಸಂಗಣ್ಣ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಕರಡಿ ಅವರ ಬೆಂಬಲಿಗರು ಕೊಪ್ಪಳದ ಬಿಜೆಪಿ ಕಚೇರಿಯ ಗಾಜು ಕಿಟಕಿ ಚೂರು ಚೂರು ಮಾಡಿದ್ದಾರೆ.