This is the title of the web page
This is the title of the web page

ನಾನು ಇವತ್ತೇ ಬಿಜೆಪಿ ಪಕ್ಷಕ್ಕೆ ಸೇರಿದರೆ ಇಡಿ ಸಮನ್ಸ್ ಬರುವುದೇ ನಿಲ್ಲುತ್ತದೆ : ಕಿಡಿಕಾರಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನಾನು ಇವತ್ತೇ ಬಿಜೆಪಿ ಪಕ್ಷಕ್ಕೆ ಸೇರಿದರೆ ಇಡಿ ಸಮನ್ಸ್ ಬರುವುದೇ ನಿಲ್ಲುತ್ತದೆ : ಕಿಡಿಕಾರಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

 

ನವದೆಹಲಿ:  ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಬಿಜೆಪಿ ತನ್ನ ಕೈಗೊಂಬೆಯಂತೆ ಕುಣಿಸುತ್ತಿದೆ. ಇಡಿ ಮತ್ತು ಮೋದಿ ಸರ್ಕಾರದ ಸತ್ಯ ಜನರಿಗೆ ಗೊತ್ತಾಗುತ್ತಿದೆ. ಇಡಿಯಿಂದ ಕಿರುಕುಳ ಪಡೆದು ಅಂಡೆಕ ಮಂದಿ ಬಿಜೆಪಿಗೆ ಹೇಗೆ ಸೇರ್ಪಡೆಯಾಗಿದ್ದಾರೆ. ನಾನು ಸಮನ್ಸ್ ನಿಂದ ಪರಾಗಬೇಕಾದರೆ ಬಿಜೆಪಿ ಸೇರಬೇಕು… ಇಲ್ಲದಿದ್ದರೆ ಜಾರಿ ನಿರ್ದೇಶನಾಲಯದಿಂದ ನಿರಂತರ ಸಮನ್ಸ್ ಬರುತ್ತಲೇ ಇರುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ‘X’ ನಲ್ಲಿ ಕಿಡಿಕಾರಿದ ಕೇಜ್ರಿವಾಲ್ ನಾನು ಚುನಾವಣೆಯಲ್ಲಿ ಭಾಗವಹಿಸಬಾರದು ಎಂಬ ಉದ್ದೇಶ ಇಟ್ಟುಕೊಂಡೆ ಬಿಜೆಪಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ತನ್ನ ಕೈಗೊಂಬೆಯಂತೆ ಕುಣಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಡಿ ರೇಡ್ ಮಾಡಿದ ನಂತರ ಅಧಿಕಾರಿಗಳಿಗೆ ನೀವು ಎಲ್ಲಿಗೆ ಹೋಗುತ್ತೀರಿ – ಬಿಜೆಪಿ ಅಥವಾ ಜೈಲಿಗೆ? ಪ್ರಶ್ನೆ ಕೇಳಲಾಗುತ್ತದೆ, ಒಂದು ವೇಳೆ ಬಿಜೆಪಿಗೆ ಹೋಗಲು ಒಪ್ಪದವರನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.