This is the title of the web page
This is the title of the web page

ಹುಕ್ಕೇರಿ : ಕ್ಷೀರಭಾಗ್ಯ ಹಾಲು ಸೇವಿಸಿ ನಾಲ್ವರು ಮಕ್ಕಳು ತೀವ್ರ ಅಸ್ವಸ್ಥ; 23 ಶಾಲಾ ಬಾಲಕರು ಆಸ್ಪತ್ರೆಗೆ ದಾಖಲು

ಹುಕ್ಕೇರಿ : ಕ್ಷೀರಭಾಗ್ಯ ಹಾಲು ಸೇವಿಸಿ ನಾಲ್ವರು ಮಕ್ಕಳು ತೀವ್ರ ಅಸ್ವಸ್ಥ; 23 ಶಾಲಾ ಬಾಲಕರು ಆಸ್ಪತ್ರೆಗೆ ದಾಖಲು

 

ಬೆಳಗಾವಿ: ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲು ಸೇವಿಸಿ ನಾಲ್ವರು ಮಕ್ಕಳು ತೀವ್ರ ಅಸ್ವಸ್ಥಗೊಂಡಿರುವ ಹುಕ್ಕೇರಿ ತಾಲೂಕಿನ ಉ. ಖಾನಾಪುರ ಗ್ರಾಮದಲ್ಲಿ ನಡೆದಿದೆ. 23 ಶಾಲಾ ಬಾಲಕರನ್ನು ಹುಕ್ಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ನಿತ್ಯವೂ ಹಾಲು ಪೂರೈಕೆ ಮಾಡುತ್ತಿದೆ. ಆದರೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ವಿಷಯವು ಮಕ್ಕಳು ಹಾಲು ಸೇವಿಸ ಬಳಿಕ ಬಹಿರಂಗವಾಗಿತ್ತು.

ಶೀಘ್ರವೇ ಎರಡು ಅಂಬ್ಯುಲನ್ಸ್ ಮೂಲಕ ಮಕ್ಕಳನ್ನುಸಂಕೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.