ಸಹೋದರ ಮತ್ತು ಸಹೋದರಿ ದುಷ್ಕರ್ಮಿಗಳು ಹಲ್ಲೆ: ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ

ಸಹೋದರ ಮತ್ತು ಸಹೋದರಿ ದುಷ್ಕರ್ಮಿಗಳು ಹಲ್ಲೆ: ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ

 

ಬೆಳಗಾವಿ: ಯುವನಿಧಿ ಅರ್ಜಿ ಸಲ್ಲಿಸಲು ಬೆಳಗಾವಿಗೆ ಬಂದಿದ್ದ ಸಹೋದರ ಮತ್ತು ಸಹೋದರಿ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ದುರ್ಘಟನೆ ಕೋಟೆ ಕರೆ ಆವರಣದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬೆಳಗಾವಿಗೆ ಆಗಮಿಸಿದ್ದಾರೆ. ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದಿ, ಆದರೆ, ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಾಳೆ , ಮುಸ್ಲಿಂ ಯುವತಿ ಪ್ರೇಮಿಗಳೆಂದು ಭಾವಿಸಿ 16 ಜನ ಕಿಡಿಗೇಡಿಗಳು ಥಳಿಸಿದ್ದಾರೆ. ಬಳಿಕ ಹತ್ತಿರವೊಂದರ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಯುವಕ ಮತ್ತು ಯುವತಿ ತಾವು ಸಹೋದರಿ, ಸಹೋದರ ಅಂತಾ ಹೇಳಿದರೂ ದುಷ್ಕರ್ಮಿಗಳು ನಂಬಿಲ್ಲ.

ಮಾರ್ಕೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

.