ಯಮವೇಗದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು: ಯುವತಿ ಗಂಭೀರ ಗಾಯ

ಯಮವೇಗದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು: ಯುವತಿ ಗಂಭೀರ ಗಾಯ

 

ಬೆಳಗಾವಿ: ಯುವತಿ ರಸ್ತೆ ದಾಟುವ ವೇಳೆ ಕಾರೊಂದು ರಬ್ಬಸವಾಗಿ ಡಿಕ್ಕಿ ಹೊಡೆದ ಪರಿಣಾಮ ಯುವತಿ 50 ಮೀಟರ್ ಹಾರಿ ಬಿದಿದ್ದು, ಗಂಭೀರ ಗಾಯಗೊಂಡಿರುವ ಘಟನೆ ಬ್ರಹ್ಮನಗರದಲ್ಲಿ ನಡೆದಿದೆ.

ಇಲ್ಲಿನ ಬ್ರಹ್ಮನಗರ ನಿವಾಸಿ ದಿವ್ಯಾ ಸುಜಯ್ ಪಾಟೀಲ್ (23) ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವತಿ. ಗಾಯಾಳು ದಿವ್ಯಾ ಬೆಳಗಾವಿಯ ಮಜಂಗಾವ ಕಡೆಯಿಂದ ಪೀರನವಾಡಿ ಕಡೆಗೆ ಹೊರಟಿದ್ದರು. ಸ್ಕೂಟಿ ಮೇಲೆ ತೆರಳುತ್ತಿದ್ದ ಯುವತಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಯುವತಿ ದೂರದಲ್ಲಿ ಹಾರಿ ಬಿದಿದ್ದಾಳೆ. ಮತ್ತು ಎರಡು ಕಾರಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದ ಪರಿಣಾಮ ಸ್ಕೂಟಿ ಪೀಸ್ ಪೀಸ್ ಆಗಿದ್ದು, ಮೂರೂ ಕಾರುಗಳು ಜಖಂಗೊಂಡಿದೆ.

ಸರಣಿ ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.