This is the title of the web page
This is the title of the web page

ಬೆಳಗಾವಿ ಅಧಿವೇಶನ : ಸುವರ್ಣ ವಿಧಾನಸೌಧದ ಸುತ್ತಲೂ ಖಾಕಿ ಸರ್ಪಗಾವಲು

ಬೆಳಗಾವಿ ಅಧಿವೇಶನ : ಸುವರ್ಣ ವಿಧಾನಸೌಧದ ಸುತ್ತಲೂ ಖಾಕಿ ಸರ್ಪಗಾವಲು

ವಿಶೇಷ ವರದಿ

ಸುರೇಶ  ನೇಲ್ಲಿ೯

ಬೆಳಗಾವಿ: ಉಕರ್ನಾಟಕ ಆಶೋತ್ತರ ಆಶಾಗೋಪುರದ ಸುವರ್ಣ ವಿಧಾನಸೌಧದ ಚಳಿಗಾಲದ ಅಧಿವೇಶನ ಡಿ.4 ರಿಂದ ಆರಂಭವಾಗಲಿದ್ದು,ಈಗಾಗಲೇ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ.

ಅಧಿವೇಶನ ಆಗಮಿಸಲಿರುವ ಪೊಲೀಸ್ ಸಿಬ್ಬಂದಿಗಳ ವಾಸ್ತವ್ಯಕ್ಕೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ.

ಅಧಿವೇಶನದ ಭದ್ರತೆಗಾಗಿ 5000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೀಗಾಗಿ ದೊಡ್ಡ ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ನೊಂದಿಗೆ ಬೃಹತ್ ಟೌನ್ ಶಿಪ್ ನಿರ್ಮಿಸಲಾಗಿದೆ.

ಸುವರ್ಣ ಸೌಧದ ಬಳಿ ಟೌನ್ ಶಿಪ್‌ ನಿರ್ಮಿಸಿ 1800 ಜನ ಸಿಬ್ಬಂದಿ, 200 ವಸತಿ ವ್ಯವಸ್ಥೆ, ಮಚ್ಛೆ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿ 600, ಕಂಗ್ರಾಳಿ ತರಬೇತಿ ಕೇಂದ್ರದಲ್ಲಿ 300, ಸಾಂಬ್ರಾ ವಿಮಾನ ನಿಲ್ದಾಣದ ಬಳಿ 150, ಭೂತರಾಮನಹಟ್ಟಿ, ವೀರಭದ್ರೇಶ್ವರ ದೇವಸ್ಥಾನ, ಶಹಾಪುರದಲ್ಲಿರುವ ದೇವಸ್ಥಾನ, ಖಾನಾಪುರ ಪೊಲೀಸ್‌ ತರಬೇತಿ ಕೇಂದ್ರ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿ, ಊಟ, ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಮಾಡಲಾಗಿದೆ.

ವಾಟರ್ ಪ್ರೂಫ್ ಟೆಂಟ್ ಇದಾಗಿದ್ದು, ಒಟ್ಟು 2000 ಜನ ಪೊಲೀಸ್ ಸಿಬ್ಬಂದಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಂಚ, ಗಾದೆ, ತಲೆ ದಿಂಬು, ಬೆಡ್ ಶೀಟ್ ನೀಡಲಾಗುತ್ತದೆ. ಹಾಗೇ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುವ್ಯವಸ್ಥಿತವಾಗಿ ಪ್ರತಿಭಟೆ ನಡೆಸಲು ಭದ್ರತೆ: ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಭಾಷಣ, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ.

ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.