This is the title of the web page
This is the title of the web page

ಮಹಾರಾಷ್ಟ್ರ ರಾಜಕೀಯ:ಅಜಿತ್ ಪವಾರ್ ಸೇರಿ ಎಂಟು ಜನರ ವಿರುದ್ಧ  ಅನರ್ಹತೆ ಅರ್ಜಿ ಸಲ್ಲಿಕೆ

ಮಹಾರಾಷ್ಟ್ರ ರಾಜಕೀಯ:ಅಜಿತ್ ಪವಾರ್ ಸೇರಿ ಎಂಟು ಜನರ ವಿರುದ್ಧ  ಅನರ್ಹತೆ ಅರ್ಜಿ ಸಲ್ಲಿಕೆ

 

ಮುಂಬೈ: ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್ ಮತ್ತು ಕೆಲ ಶಾಸಕರು ಪ್ರಮಾಣವಚನ ಸ್ವೀಕರಿಸಿ ಏಕನಾಥ್ ಶಿಂಧೆ ಸರ್ಕಾರ ಸೇರ್ಪಡೆಗೊಂಡ ನಂತರ ಬಿಕ್ಕಟ್ಟಿಗೆ ಸಿಲುಕಿದ ಎನ್ ಸಿಪಿ, ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಅನರ್ಹತೆ ಅರ್ಜಿಯನ್ನು ಸಲ್ಲಿಸಿದೆ. ಎಲ್ಲಾ ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ದೃಢವಾಗಿ ನಿಂತಿದ್ದಾರೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಜನರ ವಿರುದ್ಧ ತಮ್ಮ ಪಕ್ಷ ಅನರ್ಹತೆ ಅರ್ಜಿ ಸಲ್ಲಿಸಿದೆ ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಭಾನುವಾರ ಹೇಳಿದ್ದಾರೆ. ಶರದ್ ಪವಾರ್ ಅವರ ಸೂಚನೆಯ ನಂತರ ಅಜಿತ್ ಪವಾರ್ ಸೇರಿದಂತೆ ಒಂಬತ್ತು ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

ರಾಜ್ಯ ಶಿಸ್ತು ಸಮಿತಿಯಲ್ಲಿ ದೂರು ದಾಖಲಾದ ನಂತರ ಇಮೇಲ್ ಮೂಲಕ ವಿಧಾನಸಭೆ ಸ್ಪೀಕರ್‌ಗೆ ಅನರ್ಹತೆ ಅರ್ಜಿ ಸಲ್ಲಿಸಲಾಯಿತು. ಅದನ್ನು ವಾಟ್ಸಾಪ್ ಮತ್ತು ಐಮೆಸೇಜ್‌ನಲ್ಲಿಯೂ ದೂರು ಸಲ್ಲಿಸಲಾಗಿದ್ದು, ಅದನ್ನು ಇಂದು ಆಲಿಸುವಂತೆ ನಾವು ವಿಧಾನಸಭಾ ಸ್ಪೀಕರ್‌ಗೆ ಒತ್ತಾಯಿಸಿದ್ದೇವೆ ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ. ಎನ್‌ಸಿಪಿಯ ಈ ಶಾಸಕರನ್ನು ದೇಶದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ, ಏಕೆಂದರೆ ಅವರ ದ್ರೋಹ ಇನ್ನೂ ಸಾಬೀತಾಗಿಲ್ಲ, ಅನೇಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು.