This is the title of the web page
This is the title of the web page

ಅನ್ನರಾಮಯ್ಯ’, ‘ರೈತರಾಮಯ್ಯ’, ‘ಕನ್ನಡ ರಾಮಯ್ಯ’, “ಶಕ್ತಿರಾಮಯ್ಯ” ಎಂದೆಲ್ಲಾ ಕರೆಯುವ ಖುಷಿಪಡುವೆ  : ಸಿಎಂ ಸಿದ್ಧರಾಮಯ್ಯ

ಅನ್ನರಾಮಯ್ಯ’, ‘ರೈತರಾಮಯ್ಯ’, ‘ಕನ್ನಡ ರಾಮಯ್ಯ’, “ಶಕ್ತಿರಾಮಯ್ಯ” ಎಂದೆಲ್ಲಾ ಕರೆಯುವ ಖುಷಿಪಡುವೆ  : ಸಿಎಂ ಸಿದ್ಧರಾಮಯ್ಯ

 

ಬೆಳಗಾವಿ; ರಾಜಕೀಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಂತೆಯೇ, ಟೀಕೆ-ಟಿಪ್ಪಣಿಗಳು ಕೂಡ ಬಹಳ ಸಾಮಾನ್ಯ ಸಂಗತಿಗಳಾಗಿದ್ದು, ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಸಾರ್ವಜನಿಕ ಜೀವನದಲ್ಲಿ ಈ ಟೀಕೆ-ಟಿಪ್ಪಣಿಗಳನ್ನು ಎದುರಿಸಲೇ ಬೇಕಾಗುತ್ತದೆ. ಇದಕ್ಕೆ ಯಾವ ರಾಜಕಾರಣಿಯೂ ಕೂಡ ಹೊರತಾಗಿಲ್ಲ.
ಹೀಗೆ ಟೀಕೆಗೊಳಗಾದವರು ಕೆಲವೊಮ್ಮೆ ಅದಕ್ಕೆ ಪವರ್ ಫುಲ್ ಪಂಚ್, ಖಡಕ್ ಕೌಂಟರ್ ಕೊಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರ ಅಪಾರ ಮೆಚ್ಚುಗೆಗೂ ಪಾತ್ರರಾಗುತ್ತಾರೆ. ಈ ಮೂಲಕ ಅವರು ಇತಿಹಾಸದಲ್ಲಿ ಆಗಾಗ ನೆನಪಾಗುತ್ತಿರುತ್ತಾರೆ.
ಇದಕ್ಕೊಂದು ಉದಾಹರಣೆಯೆಂಬತೆ ಕಳೆದ ಕೆಲ ದಿನಗಳ ಹಿಂದೆ ಅಂದರೆ ಈ ಬಾರಿಯ ವಿಧಾನಸಭಾ ಚುನಾವಣೆಗೂ ಮೊದಲು ತಮ್ಮನ್ನು  ಕರೆದವರಿಗೆ ಆಗ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಹಾಲಿ ಸಿಎಂ ಸಿದ್ದರಾಮಯ್ಯ ಅವರು “ನಾನು ಮುಖ್ಯಮಂತ್ರಿಯಾಗಿ ಮಾಡಿರುವ ಕೆಲಸ ಕಾರ್ಯಗಳನ್ನು ಗುರುತಿಸಿ ಜನತೆ ನನ್ನನ್ನು ಅನ್ನರಾಮಯ್ಯ, ರೈತರಾಮಯ್ಯ, ಕನ್ನಡ ರಾಮಯ್ಯ, ಎಂದೆಲ್ಲಾ ಕರೆಯುತ್ತಾರೆ. ಅದರಂತೆ ನನ್ನನ್ನು  ಎಂದು ಕರೆದರೆ ಅದಕ್ಕೆ ನನಗೇನೂ ಬೇಸರವಿಲ್ಲ. ನಾಡಿನ ಜನತೆ ಪ್ರಜ್ಞಾವಂತರಾಗಿದ್ದು, ಅವರು ಅಪಪ್ರಚಾರ ನಂಬುವುದಿಲ್ಲ”