ಕಾಂಗ್ರೆಸ್ ಅಮೋಘ ಗೆಲುವು: ಹುಟ್ಟುಹಬ್ಬದ ಉಡುಗೊರೆ ಎಂದ ಕೆಪಿಸಿಸಿ ಡಿ ಕೆಶಿ

ಕಾಂಗ್ರೆಸ್ ಅಮೋಘ ಗೆಲುವು: ಹುಟ್ಟುಹಬ್ಬದ ಉಡುಗೊರೆ ಎಂದ ಕೆಪಿಸಿಸಿ ಡಿ ಕೆಶಿ

 

ಬೆಂಗಳೂರು: ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಮೋಘ ಗೆಲುವು ನನಗೆ ಜನ ನೀಡಿದ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ಸೋಮವಾರ ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, “ನನ್ನ ಜೀವನವು ಕರ್ನಾಟಕದ ಜನರ ಸೇವೆಗೆ ಮುಡಿಪಾಗಿದೆ” ಎಂದು ಹೇಳಿದರು.

“ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಜನತೆ ಅತ್ಯುತ್ತಮ ಉಡುಗೊರೆ ನೀಡಿದ್ದಾರೆ. ಶುಭಾಶಯ ಕೋರಿದ ಕಾಂಗ್ರೆಸ್ ಕುಟುಂಬಕ್ಕೆ ನನ್ನ ಧನ್ಯವಾದಗಳು” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದ ಗೆಲುವು ಸಾಧಿಸಿದೆ. 224 ಸ್ಥಾನದ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದಿದೆ.