This is the title of the web page
This is the title of the web page

ಮೋದಿ ರೋಡ್’ಶೋ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಿತು

ಮೋದಿ ರೋಡ್’ಶೋ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಿತು

 

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಮತದಾರರ ಮನಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದಲ್ಲಿ ಶನಿವಾರ ರೋಡ್ ಶೋ ನಡೆಸಿದರು.

ನಗರದ ಸೋಮೇಶ್ವರ ಸಭಾಭವನದಿಂದ ಮೋದಿಯವರು ರೋಡ್ ಶೋ ಆರಂಭಿಸಿದ್ದು, ಪ್ರಧಾನಮಂತ್ರಿಗಳೊಂದಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಸಾಥ್ ನೀಡಿದರು.

ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆಸಿದ್ದು, ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಿತು. ರೇಷ್ಮೆಯ ಕೇಸರಿ ಮೈಸೂರು‌ ಪೇಟಾದಲ್ಲಿ ಕಂಗೊಳಿಸಿದ್ದು, ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಸಿದರು.

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಕಾರ್ಮಿಕರು ಸೇರಿದಂತೆ ಹಲವರು ಮೋದಿಯವರ ರೋಡ್’ಶೋಗೆ ಸಾಕ್ಷಿಯಾಗಿದ್ದು, ಮಕ್ಕಳು ಕೂಡ ಮೋದಿಯವರ ಪೋಸ್ಟರ್ ಮತ್ತು ಪೇಂಟಿಂಗ್‌ಗಳನ್ನು ಹಿಡಿದುಕೊಂಡಿದ್ದು, ರೋಡ್ ಶೋಗೆ ಸಂತಸ ವ್ಯಕ್ತಪಡಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜಗಳು ಕಂಡು ಬಂದಿದ್ದು, ಎಲ್ಲೆಡೆ ಕೇಸರಿ ಬಣ್ಣಗಳೇ ರಾರಾಜಿಸುತ್ತಿವೆ. ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಕೇಸರಿ ಶಾಲು ಮತ್ತು ಕ್ಯಾಪ್ಗಳನ್ನು ಧರಿಸಿರುವುದು ಕಂಡು ಬಂದಿತು. ರಸ್ತೆಯುದ್ದಕ್ಕೂ ಸಾಂಸ್ಕೃತಿಕ ಕಲಾತಂಡಗಳು ಪ್ರದರ್ಶನ ನೀಡಿದ್ದು, ಇದು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿತು.