This is the title of the web page
This is the title of the web page

ಪ್ರಧಾನಿ ಮೋದಿ: ರಾಜ್ಯದಲ್ಲಿ ಕೊರೊನಾ ಬಂದಾಗ ಬರಲಿಲ್ಲ ನೆರೆ ಬಂದಾಗ ಬರಲಿಲ್ಲ ಜನರಿಗೆ ನೆರೆ, ಬರ ಇನ್ನಿತರೆ ಕಷ್ಟಗಳಿದ್ದಾಗ ಬಾರದಿರುವ ಪ್ರಧಾನಿ ಮೋದಿ ಈಗ ಚುನಾವಣೆ ಬಂದಾಗ ಮೇಲಿಂದ ಮೇಲೆ ಬರುತ್ತಿದ್ದಾರೆ ; ಕುಮಾರಸ್ವಾಮಿ ಆಕ್ರೋಶ

ಪ್ರಧಾನಿ ಮೋದಿ: ರಾಜ್ಯದಲ್ಲಿ ಕೊರೊನಾ ಬಂದಾಗ ಬರಲಿಲ್ಲ ನೆರೆ ಬಂದಾಗ ಬರಲಿಲ್ಲ ಜನರಿಗೆ ನೆರೆ, ಬರ ಇನ್ನಿತರೆ ಕಷ್ಟಗಳಿದ್ದಾಗ ಬಾರದಿರುವ ಪ್ರಧಾನಿ ಮೋದಿ ಈಗ ಚುನಾವಣೆ ಬಂದಾಗ ಮೇಲಿಂದ ಮೇಲೆ ಬರುತ್ತಿದ್ದಾರೆ ; ಕುಮಾರಸ್ವಾಮಿ ಆಕ್ರೋಶ

 

ಕೊಪ್ಪಳ,ಮೇ 3 ಪ್ರಧಾನಿ ಮೋದಿ: ರಾಜ್ಯದಲ್ಲಿ ಕೊರೊನಾ ಬಂದಾಗ ಬರಲಿಲ್ಲ ನೆರೆ ಬಂದಾಗ ಬರಲಿಲ್ಲ ಜನರಿಗೆ ನೆರೆ, ಬರ ಇನ್ನಿತರೆ ಕಷ್ಟಗಳಿದ್ದಾಗ ಬಾರದಿರುವ ಪ್ರಧಾನಿ ಮೋದಿ ಈಗ ಚುನಾವಣೆ ಬಂದಾಗ ಮೇಲಿಂದ ಮೇಲೆ ಬರುತ್ತಿದ್ದಾರೆ  ಕುಮಾರಸ್ವಾಮಿ ಆಕ್ರೋಶ ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ?ರಾಜ್ಯದ ಜನರಿಗೆ ನೆರೆ, ಬರ ಇನ್ನಿತರೆ ಕಷ್ಟಗಳಿದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ. ಇವರು ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಬರಬೇಕಾಗಿತ್ತು. ಇವಾಗ ಬಂದು ಮೋದಿಯವರು ರೋಡ್ ಶೋ ಮೂಲಕ ಜನರತ್ತ ಕೈ ಬೀಸುತ್ತಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು‌. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಅವರು ಕೇಳಿದರು.

ಇಷ್ಟು ದಿನ ಏನನ್ನೂ ಮಾಡದವರು ಈಗ ಬಂದು ನಲ್ಲಿಯಲ್ಲಿ ನೀರು ಕೊಡ್ತಿನಿ ಅಂತ ಮೋದಿ ಹೇಳ್ತಾ ಇದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ? ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ. ಇದರಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಸಂಪದ್ಭರತರಾಗಿದ್ದಾರೆ ಎಂದು ಹೆಚ್.ಡಿಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.