ಬೆಂಗಳೂರು: ಚುನಾವಣೆ ಹೊತ್ತಲೇ ಪೋಲಿಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಇಬ್ಬರು IPS ಅಧಿಕಾರಿಗಳಿಗೆ ಭಡ್ತಿ ನೀಡಿ ಆದೇಶ ಹೊರಡಿಸಿಸಲಾಗಿದೆ.
ಪ್ರಶಾಂತ್ ಕುಮಾರ್ ಠಾಕೂರ್ ಗೆ DGP ಯಾಗಿ ಭಡ್ತಿ ಆದೇಶ ನೀಡಿದ್ದಾರೆ. ಲೋಕಾಯುಕ್ತ ADGP ಯಾಗಿದ್ದ ಪ್ರಶಾಂತ್ ಕುಮಾರ್ ಠಾಕೂರ್ ಗೆ DGP ಹುದ್ದೆಗೆ ಭಡ್ತಿ ನೀಡಿ ಲೋಕಾಯುಕ್ತ DGP ಯಾಗಿ ಹುದ್ದೆ ಅಪ್ ಗ್ರೇಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಲೋಕಾಯುಕ್ತ DGP ಯಾಗಿ ಪ್ರಶಾಂತ್ ಕುಮಾರ್ ಠಾಕೂರ್ ಮುಂದುವರಿಕೆಯಾಗಿದ್ದಾರೆ.1992 ಬ್ಯಾಚ್ IPS ಅಧಿಕಾರಿಯಾಗಿರುವ ಠಾಕೂರ್ ಮತ್ತು IPS ಅಧಿಕಾರಿ ಎಸ್. ರವಿ ADGPಯಾಗಿ ಭಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. IGP ಹುದ್ದೆಯಿಂದ ADGP ಹುದ್ದೆಗೆ ಭಡ್ತಿ ನೀಡಿದ್ದಾರೆ.
ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ADGP ಎಸ್.ರವಿ ಅವರನ್ನು ನೇಮಕ ಮಾಡಿದ್ದಾರೆ. PCAS ಹುದ್ದೆ ADGP ಹುದ್ದೆಗೆ ಅಪ್ ಗ್ರೇಡ್ ಮಾಡಿ ಆದೇಶ ನೀಡಿದ್ದಾರೆ.