This is the title of the web page
This is the title of the web page

ಸೋಲಿಸಲು ಕರೆ ನೀಡಿದ್ದ ಯಡಿಯೂರಪ್ಪಗೆ ಶೆಟ್ಟರ್ ಟಕ್ಕರ್

ಸೋಲಿಸಲು ಕರೆ ನೀಡಿದ್ದ ಯಡಿಯೂರಪ್ಪಗೆ ಶೆಟ್ಟರ್ ಟಕ್ಕರ್

 

ಧಾರವಾಡ: ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಾತಿ ರಾಜಕಾರಣ ತಾರಕಕ್ಕೇರಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವೀರಶೈವ, ಲಿಂಗಾಯತ ಗುಪ್ತ ಸಭೆ ಆಗಿದೆ.

ಈಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಮುಖ ಮುಖಂಡರ ಜೊತೆ ಗುಪ್ತ ಸಭೆ ಮಾಡಿ ಯಡಿಯೂರಪ್ಪ ಅವರಿಗೆ ಕೌಂಟರ್ ಕೊಟ್ಟಿದ್ದಾರೆ. ಗುಪ್ತ ಸಭೆಯಲ್ಲಿ ಜಗದೀಶ ಶೆಟ್ಟರ್ ಗೆಲ್ಲಿಸುತ್ತೇವೆಂದು ವೀರಶೈವ ಲಿಂಗಾಯತರು ಶಪಥ ಮಾಡಿದ್ದಾರೆ ಎನ್ನಲಾಗಿದೆ. ಕೇಶ್ವಾಪುರದ ಖಾಸಗಿ ಹೋಟೆಲ್​ನಲ್ಲಿ ವೀರಶೈವ ಲಿಂಗಾಯತ ಗುಪ್ತ ಸಭೆ ನಡೆದಿದೆ. ಮುಖಂಡರಾದ ಬಂಗಾರೇಶ್ ಹಿರೇಮಠ ಹಾಗೂ ರಾಜಶೇಖರ್ ಮೆಣಸಿನಕಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ತಮಗೆ ಬಿಜೆಪಿಯಲ್ಲಿ ಅಪಮಾನ ಆಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ಶೆಟ್ಟರ್ ಅಲವತ್ತುಕೊಂಡಿದ್ದಾರೆ. ಸಮಾಜದ ಪ್ರೀತಿ, ವಿಶ್ವಾಸದ ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ ಎಂದು ಈ ವೇಳೆ ಶೆಟ್ಟರ್ ತಿಳಿಸಿದ್ದಾರೆ.

ಶೆಟ್ಟರ್ ಶಕ್ತಿ ಪ್ರದರ್ಶನ
ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡೋದು ಬೇಡ. ನಾವೆಲ್ಲರೂ ಶೆಟ್ಟರ್ ಗೆಲುವಿಗೆ ಶ್ರಮಿಸೋಣ ಎಂದು ಮುಖಂಡರು ಸಂಕಲ್ಪ ತೆಗೆದುಕೊಂಡಿದ್ದಾರೆ.